ಪ್ರವೀಣ್ ಸೂದ್ ಅವರು 2017ರ ಅಕ್ಟೋಬರ್ನಲ್ಲಿ ಎಡಿಜಿಪಿಯಿಂದ ಡಿಜಿ ಹುದ್ದೆಗೆ ಬಡ್ತಿ ಹೊಂದಲಿದ್ದು, ಅಲ್ಲಿಯವರೆಗೂ ಕಮಿಷನರ್ ಹುದ್ದೆ ಇಲ್ಲ ಎಂದು ಇಲಾಖೆಯ ಲೆಕ್ಕಾಚಾರವಾಗಿತ್ತು. ಸರ್ಕಾರ ಎಲ್ಲಾ ಲೆಕ್ಕಾಚಾರ ತಲೆಕೆಳಗೆ ಮಾಡಿದ್ದು, ಬೆಂಗಳೂರಿಗೆ ನೋತನ ಪೊಲೀಸ್ ಸಾರಥಿಯನ್ನು ನಿಯೋಜನೆ ಮಾಡಿದೆ.
ಬೆಂಗಳೂರು(ಜು.31): ಬೆಂಗಳೂರು ಪೊಲೀಸ್ ಇಲಾಖೆಯ ಸಾರಥಿಯನ್ನು ರಾಜ್ಯ ಸರ್ಕಾರ ಇದ್ದಕ್ಕಿದ್ದಂತೆ ಬದಲಾವಣೆ ಮಾಡಿ ಅಚ್ಚರಿ ಮೂಡಿಸಿದೆ. ಕೇವಲ 7 ತಿಂಗಳ ಕಾಲ ಕಮಿಷನರ್ ಕಾರ್ಯ ನಿರ್ವಹಿಸಿದ ಅವರಿಗೆ ಕೋಕ್ ನೀಡಿ, ಟಿ.ಸುನಿಲ್ ಕುಮಾರ್ ಅವರಿಗೆ ಮಣೆ ಹಾಕಲಾಗಿದೆ. ತುಂಬ ದಿನಗಳ ಪ್ರಯತ್ನದ ಬಳಿಕ ಸುನಿಲ್ ಕುಮಾರ್ ಕೊನೆಗೂ ಪೊಲೀಸ್ ಕಮಿಷನರ್ ಹುದ್ದೆಯನ್ನು ಇಂದು ಅಲಂಕರಿಸಿದ್ದಾರೆ.
ಪ್ರವೀಣ್ ಸೂದ್ ಅವರು 2017ರ ಅಕ್ಟೋಬರ್ನಲ್ಲಿ ಎಡಿಜಿಪಿಯಿಂದ ಡಿಜಿ ಹುದ್ದೆಗೆ ಬಡ್ತಿ ಹೊಂದಲಿದ್ದು, ಅಲ್ಲಿಯವರೆಗೂ ಕಮಿಷನರ್ ಹುದ್ದೆ ಇಲ್ಲ ಎಂದು ಇಲಾಖೆಯ ಲೆಕ್ಕಾಚಾರವಾಗಿತ್ತು. ಸರ್ಕಾರ ಎಲ್ಲಾ ಲೆಕ್ಕಾಚಾರ ತಲೆಕೆಳಗೆ ಮಾಡಿದ್ದು, ಬೆಂಗಳೂರಿಗೆ ನೋತನ ಪೊಲೀಸ್ ಸಾರಥಿಯನ್ನು ನಿಯೋಜನೆ ಮಾಡಿದೆ.
ಪೊಲೀಸ್ ಆಯುಕ್ತರಾಗಿ ಅಧಿಕಾರಿ ಸ್ವೀಕರಿಸಿರುವ ಸುನಿಲ್ ಕುಮಾರ್ ಮೂಲತಃ ಆಂಧ್ರ ಪ್ರದೇಶದ ಚಿತ್ತೂರು ಮೂಲದವರು. 1989ರ ಬ್ಯಾಚ್ನ ಕರ್ನಾಟಕ ಕೇಡರ್ ಅಧಿಕಾರಿಯಾಗಿ ಆಯ್ಕೆಯಾದ ಸುನಿಲ್ ಕುಮಾರ್ ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಸ್ಪಿ ಆಗಿ, ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಕೆಲಸ ಮಾಡಿದ ಅನುಭವ ಕೂಡ ಅವರಿಗಿದ್ದು, ಬೆಂಗಳೂರು ನಗರದ ಬಗ್ಗೆ ಸಾಕಷ್ಟು ಅನುಭನವ ಹೊಂದಿದ್ದಾರೆ. ಅಲ್ಲದೆ, ಬೆಂಗಳೂರು ಪೊಲೀಸ್ ಆಯುಕ್ತರಾಗುವ ಬಹುದಿನ ಅವರ ಕನಸು ಇಂದು ನನಸಾಗಿದೆ.
ಹೋರಾಟಗಾರರ ಮೇಲೆ ಕೇಸ್ ಹಾಕಿದ್ದಕ್ಕೆ ವರ್ಗಾವಣೆ ?
ಸುವರ್ಣ ನ್ಯೂಸ್'ಗೆ ಬಂದಿರುವ ಉನ್ನತ ಮೂಲಗಳ ಮಾಹಿತಿ ಪ್ರಕಾರ ಮೆಟ್ರೋ ಕನ್ನಡ ಪರ ಹೋರಾಟಗಾರರ ಮೇಲೆ ಕೇಸ್ ಹಾಕಿದ್ದಕ್ಕೆ ಗರಂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ.