ಬೆಂಗಳೂರು ಕಲಾಸಿಪಾಳ್ಯದ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ನಿಜಕ್ಕೂ ಇಂದಿನ ಸೋಶಿಯಲ್ ಮೀಡಿಯಾ ಅಧೋಗತಿ, ಜನರು ಯೋಚನೆ ಮಾಡುವ ಕೆಟ್ಟ ರೀತಿ ಎಲ್ಲವನ್ನು ಎಳೆಎಳೆಯಾಗಿ ಹೇಳುತ್ತಿದೆ.

ಬೆಂಗಳೂರು[ಜು. 25] ಪತ್ನಿ ಜತೆಗೆ ನೀವು ಕಳೆದಿರುವ ರಸಕ್ಷಣಗಳ ವಿಡಿಯೋ ನನ್ನ ಬಳಿ ಇದ್ದು 3 ಲಕ್ಷ ರೂ. ಹಣ ನೀಡದಿದ್ದರೆ ಇಂಟರ್‌ ನೆಟ್ ಮತ್ತು ಸೋಶಿಯಲ್ ಮೀಡಿಯಾಕ್ಕೆ ಅಪ್ ಲೋಡ್ ಮಾಡುತ್ತೇನೆ ಎಂಬ ಬೆದರಿಕೆ ಕರೆಗಳು ಬರುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪತ್ನಿ ಒಪ್ಪಿಗೆ ಪಡೆದುಕೊಂಡೇ ಆಕೆಯೊಂದಿಗೆ ನಡೆಸಿದ ಲೈಂಗಿಕ ಕ್ರಿಯೆಯ ವಿಡಿಯೋ ಮಾಡಿದ್ದೆ. ಜುಲೈ 18 ರಂದು ಬೇರೆ ಬೇರೆ ನಂಬರ್ ಗಳಿಂದ ಕರೆ ಮಾಡಿದ್ದ ಅಪರಿಚಿತರು ನೀವು ಮತ್ತು ನಿಮ್ಮ ಹೆಂಡತಿ ರಸಕ್ಷಣ ಕಳೆದಿರುವ ವಿಡಿಯೋ ನನ್ನ ಬಳಿ ಇದ್ದು ಹಣ ನೀಡಿ ಎಂದು ಬೇಡಿಕೆ ಇಡುತ್ತಿದ್ದಾರೆ.

ಪ್ರೇಮಸಲ್ಲಾಪದ ವಿಡಿಯೋ ಲೀಕ್: 9 ಮಕ್ಕಳ ತಂದೆಯನ್ನೇ ಖೆಡ್ಡಾಕ್ಕೆ ಕೆಡವಿದ ಯುವತಿ..!

ನಿರಂತರ ಮೂರು ನಾಲ್ಕು ತಿಂಗಳಿಂದ ಬೆದರಿಕೆ ಕರೆ ಬರುತ್ತಲೇ ಇದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಮೊದಲಿಗೆ ಕರೆಗಳನ್ನು ನಿರ್ಲಕ್ಷ್ಯ ಮಾಡಿದ್ದೆ ಯಾರಟ್ ಹತ್ತಿರದವರೆ ಈ ರೀತಿ ಮಾಡುತ್ತಿದ್ದಾರೆ ಎಂದು ವ್ಯಕ್ತಿ ದೂರಿನಲ್ಲಿ ಆತಂಕ ತೋಡಿಕೊಂಡಿದ್ದಾರೆ.