ಮಂಗಳೂರು, (ಜೂ29): ಜಿಲ್ಲೆಯ ಬಂಟ್ವಾಳದಲ್ಲಿ ನಡೆದ ಪ್ರೇಮಸಲ್ಲಾಪದ ವಿಡಿಯೋ ವೈರಲ್ ಪ್ರಕರ ದೊಡ್ಡ ತಿರುವು ಸಿಕ್ಕಿದಿದೆ. ಪ್ರಕರಣ ಸಂಬಂಧ ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಇದೊಂದು ಹನಿಟ್ರ್ಯಾಪ್  ಕೇಸ್ ಎಂದು ತಿಳಿದುಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೀನು ವ್ಯಾಪಾರಿ  ಅಬ್ದುಲ್ ರಹಿಮಾನ್ ಎನ್ನುವಾತ ಯುವತಿ ಜತೆ ಸರಸ ಸಲ್ಲಾಪದಲ್ಲಿ ತೊಡಗಿದ್ದ ವಿಡಿಯೋ ಎರಡು ದಿನಗಳ ಹಿಂದೆ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

ಆನಂತರ ರಹಿಮಾನೇ ವಿಡಿಯೋ ಹರಿಯಬಿಟ್ಟಿದ್ದಾನೆಂದು ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ನಿಜ ಸಂಗತಿಯನ್ನು ಬೆಳಕಿಗೆ ತಂದಿದ್ದು, ತನಿಖೆ ವೇಳೆ ಇದೊಂದು ಹನಿಟ್ರ್ಯಾಪ್ ಪ್ರಕರಣ ಎಂಬುದು ಬೆಳಕಿಗೆ ಬಂದಿದೆ. 

ಪ್ರಿಯತಮೆಗೆ ಇರಿದು ತಾನೂ ಇರಿದುಕೊಂಡ ಪಾಗಲ್ ಪ್ರೇಮಿ

ಹನಿ ಟ್ರ್ಯಾಪ್ ಮೂಲಕ ಅಶ್ಲೀಲ ವಿಡಿಯೋ ಮಾಡಿ ಹಣಕ್ಕಾಗಿ ಬೆದರಿಕೆ ಒಡ್ಡಿದ ಘಟನೆ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಡಗು ಜಿಲ್ಲೆಯ ಮೂಲದವಳು ಎನ್ನಲಾದ ಯುವತಿ , 8 ತಿಂಗಳ ಹಿಂದೆ ವಾಯ್ಸ್ ಮೆಸೇಜ್ ಮೂಲಕ ರಹಿಮಾನ್ ಗೆ ಪರಿಚಯ ಆಗಿತ್ತು.

ಬಳಿಕ ಸಂಬಂಧ ಬೆಳೆದು ಮಂಗಳೂರಿನ ಲಾಡ್ಜ್ ಒಂದರಲ್ಲಿ ಯುವತಿಯೇ ಸ್ವತಃ ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡಿದ್ದಾಳೆ. ಇದೇ ವಿಡಿಯೋವನ್ನಿಟ್ಟುಂಕೊಂಡು ಎರಡು ವಾರದ ಬಳಿಕ ನಾಲ್ವರು ಅಪರಿಚಿತ ತಂಡವೊಂದು, ರಹಿಮಾನನ್ನು ಬ್ಲಾಕ್ ಮೇಲ್ ಮಾಡಿ ಹಣಕ್ಕಾಗಿ ಪೀಡಿಸಿದ್ದಾರೆ.

ಹಣ ಕೊಡದಿದ್ದಾಗ ಆತನನ್ನು ಅಪಹರಿಸಿ, ಒಟ್ಟು 1 ಲಕ್ಷದ ರು.ಗಿಂತ ಹೆಚ್ಚು ಪೀಕಿಸಿದ್ದರು. ಅಲ್ಲದೆ, ಎಟಿಎಂ ಕಾರ್ಡ್ ಪಡೆದು 9 ಸಾವಿರ ರೂಪಾಯಿ ಡ್ರಾ ಮಾಡಿದ್ದರು. ಹೀಗೆಲ್ಲ ನಡೆದಿದ್ದರೂ, ಮರ್ಯಾದೆಗೆ ಅಂಜಿದ ಮೀನಿನ ವ್ಯಾಪಾರಿ, ಪೊಲೀಸರಿಗೆ ದೂರು ಕೊಟ್ಟಿರಲಿಲ್ಲ. 

ಆದರೆ, ಹನಿಟ್ರ್ಯಾಪ್ ತಂಡ ಮತ್ತಷ್ಟು ಹಣಕ್ಕಾಗಿ ಬೇಡಿಕೆ ಮುಂದಿಟ್ಟು ವಿಡಿಯೋವನ್ನು ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಪೊಲೀಸರು ಇದೀಗ ಪ್ರಕರಣ ದಾಖಲಿಸಿಕೊಂಡು ಯುವತಿ ಮತ್ತು ಆಕೆಯ ನಾಲ್ವರು ಸಹಚರರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.