ಶ್ರೀರಾಂಪುರದ ದಯಾನಂದನಗರದಲ್ಲಿ ಪ್ರತಿ ವರ್ಷ ಆಚರಿಸಲಾಗುವ ಸರ್ಕಲ್ ಮಾರಮ್ಮ ಉತ್ಸವವನ್ನ ಈ ಬಾರಿಯೂ ಅದ್ದೂರಿಯಾಗಿ ಆಚರಿಸಲಾಯಿತು. ಮೂರು ದಿನಗಳ ಕಾಲ ನಡೆಯುವ ದೇವರ ಉತ್ಸವದಲ್ಲಿ ಈ ಬಾರಿ ನಡೆದದ್ದು ಮಾತ್ರ ಲಲನೆಯರ ಥಳಕು ಬಳಕಿನ ಪ್ರದರ್ಶನ. ತಮಿಳುನಾಡು ಮೂಲದ ಹುಡುಗಿಯರನ್ನು ಕರೆಸಿ ಸಾರ್ವಜನಿಕರ ಸಮ್ಮುಖದಲ್ಲಿಯೇ ಅಶ್ಲೀಲ ನೃತ್ಯ ಪ್ರದರ್ಶನ ಮಾಡುವ ಮೂಲಕ ನೆರೆದಿದ್ದವರನ್ನು ರಂಜಿಸಲಾಯಿತು. ಈ ಕಾರ್ಯಕ್ರಮದ ಮೇಲುತ್ಸುವಾರಿ ಸ್ಥಳೀಯ ಕಾಪೋರೇಟರ್ ಕುಮಾರಿ ಪತಿ ಪಳನೀಕಾಂತ್. ವಿಚಿತ್ರವೆಂದರೆ ಈ ಕಾರ್ಯಕ್ರಮದ ಉದ್ದಕ್ಕೂ ವಾರ್ಡ್​ ನಂಬರ್ 97ರ ಕಾಪೋರೇಟರ್ ಕುಮಾರಿ ಪತಿ ಪಳನೀಕಾಂತ್ ಅವರದ್ದೇ ಸದ್ದು. ಹುಡುಗಿಯರ ಸೊಂಟ ಹಿಡಿದುಕೊಂಡು ಕಾಪೋರೇಟರ್ ಗಂಡನ ಆಟ ಪಡ್ಡೆ ಹುಡುಗನನ್ನು ಮೀರಿಸುವಂತಿತ್ತು.

ಬೆಂಗಳೂರು(ಅ.13): ಶ್ರೀರಾಂಪುರದ ದಯಾನಂದನಗರದಲ್ಲಿ ಪ್ರತಿ ವರ್ಷ ಆಚರಿಸಲಾಗುವ ಸರ್ಕಲ್ ಮಾರಮ್ಮ ಉತ್ಸವವನ್ನು ಈ ಬಾರಿಯೂ ಅದ್ದೂರಿಯಾಗಿ ಆಚರಿಸಲಾಯಿತು. ಮೂರು ದಿನಗಳ ಕಾಲ ನಡೆಯುವ ದೇವರ ಉತ್ಸವದಲ್ಲಿ ಈ ಬಾರಿ ನಡೆದದ್ದು ಮಾತ್ರ ಲಲನೆಯರ ಥಳಕು ಬಳಕಿನ ಪ್ರದರ್ಶನ. ತಮಿಳುನಾಡು ಮೂಲದ ಹುಡುಗಿಯರನ್ನು ಕರೆಸಿ ಸಾರ್ವಜನಿಕರ ಸಮ್ಮುಖದಲ್ಲಿಯೇ ಅಶ್ಲೀಲ ನೃತ್ಯ ಪ್ರದರ್ಶನ ಮಾಡುವ ಮೂಲಕ ನೆರೆದಿದ್ದವರನ್ನು ರಂಜಿಸಲಾಯಿತು.

ಈ ಕಾರ್ಯಕ್ರಮದ ಮೇಲುತ್ಸುವಾರಿ ಸ್ಥಳೀಯ ಕಾಪೋರೇಟರ್ ಕುಮಾರಿ ಪತಿ ಪಳನೀಕಾಂತ್. ವಿಚಿತ್ರವೆಂದರೆ ಈ ಕಾರ್ಯಕ್ರಮದ ಉದ್ದಕ್ಕೂ ವಾರ್ಡ್​ ನಂಬರ್ 97ರ ಕಾಪೋರೇಟರ್ ಕುಮಾರಿ ಪತಿ ಪಳನೀಕಾಂತ್ ಅವರದ್ದೇ ಸದ್ದು. ಹುಡುಗಿಯರ ಸೊಂಟ ಹಿಡಿದುಕೊಂಡು ಕಾಪೋರೇಟರ್ ಗಂಡನ ಆಟ ಪಡ್ಡೆ ಹುಡುಗನನ್ನು ಮೀರಿಸುವಂತಿತ್ತು.

ಶ್ರೀರಾಂಪುರದ ಪೊಲೀಸ್​​ ಠಾಣೆಯ ಪಕ್ಕದಲ್ಲೇ ಇಂಥಾ ಅಶ್ಲೀಲ ನೃತ್ಯ ನಡೆದಿರುವುದು ದುರಂತವೇ ಸರಿ. ಸಮಾಜ ಸೇವಕನ ಹೆಸರಿನಲ್ಲಿ ಇಂಥಾ ಕಾರ್ಯಕ್ರಮಗಳನ್ನು ಮಾಡುತ್ತಿರುವ ಪಳನೀಕಾಂತ್'ಗೆ ಅದ್ಯಾವ ಬಲವಿದಿಯೋ ಗೊತ್ತಿಲ್ಲ. ದುರಂತವೆಂದರೆ ಎಲ್ಲಾ ಗೊತ್ತಿದ್ದು, ಶ್ರೀರಾಂ​ಪುರ ಪೊಲೀಸರು ಸುಮ್ಮನಿರುವುದು ಯಾಕೆ ಎನ್ನುವುದೇ ದೊಡ್ಡ ಪ್ರಶ್ನೆ.