ಇಂದು ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಸೀನನ ಹತ್ಯೆ ಆರೋಪಿ ರೋಹಿತ್ ಅಲಿಯಾಸ್ ಒಂಟೆ ಶ್ರೀಧರ್ ಅವರ ಮನೆಯಲ್ಲಿ ಅಡಗಿರುವ ಶಂಕೆಯಲ್ಲಿ ಸರ್ಚ್ ವಾರಂಟ್'ನೊಂದಿಗೆ ಐವರು ಡಿಸಿಪಿ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿದ್ದರು.
ಬೆಂಗಳೂರು(ಫೆ.07): ಕಡಬಗೆರೆ ಸೀನನ ಹತ್ಯೆಯಲ್ಲಿ ಭಾಗಿಯಾಗಿದ್ದ ಎನ್ನಲಾದ ಆರೋಪಿ ಒಂಟೆ ಅಲಿಯಸ್ ರೋಹಿತ್'ನನ್ನು ಪೊಲೀಸರು ಬಂಧಿಸಿದ್ದಾರೆ. ಅಗ್ನಿಶ್ರೀಧರ್ ದಯಾನಂದ ಸಾಗರ್ ಆಸ್ಪತ್ರೆಗೆ ದಾಖಲಾದ ವಿಚಾರ ತಿಳಿದು ಆಸ್ಪತ್ರೆಗೆ ಬಂದ ರೋಹಿತ್‌ನನ್ನು ಕೆ.ಆರ್. ಪುರ ಎಸಿಪಿ ರವಿಕುಮಾರ್ ವಶಕ್ಕೆ ಪಡೆದಿದ್ದಾರೆ.
ಇಂದು ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಸೀನನ ಹತ್ಯೆ ಆರೋಪಿ ರೋಹಿತ್ ಅಲಿಯಾಸ್ ಒಂಟೆ ಶ್ರೀಧರ್ ಅವರ ಮನೆಯಲ್ಲಿ ಅಡಗಿರುವ ಶಂಕೆಯಲ್ಲಿ ಸರ್ಚ್ ವಾರಂಟ್'ನೊಂದಿಗೆ ಐವರು ಡಿಸಿಪಿ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಪೊಲೀಸರು ದಾಳಿ ನಡೆಸಿದ್ದರು. ಪೊಲೀಸರ ವಿಚಾರಣೆ ವೇಳೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಾಗ ಅಗ್ನಿ ಶ್ರೀಧರ್ ಅವರಿಗ ಲಘು ಹೃದಯಾಘಾತವಾಗಿತ್ತು.
