ದೇಶದಿಂದ ಭಯೋತ್ಪಾದನೆಯನ್ನು ಹೊಡೆದುರುಳಿಸಲು ಶ್ರಮಿಸುತ್ತಿರುವ ಭಾರತೀಯ ಸೇನೆ ನಿನ್ನೆ 6 ಲಷ್ಕರೆ ಉಗ್ರರನ್ನು ಹತ್ಯೆ ಮಾಡಿದೆ.
ಬಂಡಿಪೋರ (ನ.19): ದೇಶದಿಂದ ಭಯೋತ್ಪಾದನೆಯನ್ನು ಹೊಡೆದುರುಳಿಸಲು ಶ್ರಮಿಸುತ್ತಿರುವ ಭಾರತೀಯ ಸೇನೆ ನಿನ್ನೆ 6 ಲಷ್ಕರೆ ಉಗ್ರರನ್ನು ಹತ್ಯೆ ಮಾಡಿದೆ.
ಬಂಡಿಪೋರ ಎನ್ಕೌಂಟರ್ ಬಗ್ಗೆ ಸೇನೆ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಜೆಎಸ್ ಸಂದು, ಡಿಜಿಪಿ ಎಸ್ಪಿ ವೇದ ಹತ್ಯೆ ಕುರಿತು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಮ್ಮು ಕಾಶ್ಮೀರದಲ್ಲಿ ನಿರಂತರವಾಗಿ ಉಗ್ರರನ್ನು ಹತ್ತಿಕ್ಕಲಾಗುತ್ತಿದೆ. ಕಣಿವೆ ರಾಜ್ಯದಲ್ಲಿ ಶಾಂತಿ ನೆಲೆಸುತ್ತಿದೆ. ಲಷ್ಕರೆ ಮುಖಂಡ 26/11 ರ ದಾಳಿಯ ರೂವಾರಿ ಲಕ್ವಿ ಸಹೋದರ ಸಂಬಂಧಿಯನ್ನು ಬಂಡಿಪೋರ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿದೆ. 2017ರಲ್ಲೇ 190 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಲಷ್ಕರ್ ಈ ತೋಯ್ಬಾ ಸಂಘಟನೆ ಕಾರ್ಯಚಟುವಟಿಕೆಗಳಿಗೆ ಲಗಾಮು ಹಾಕಲಾಗಿದೆ. ಸಿಆರ್ಫಿಎಫ್, ಸೇನೆ ಮತ್ತು ಕಾಶ್ಮೀರದ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ, ಭಯೋತ್ಪಾದನೆಯನ್ನು ನಿಯಂತ್ರಣಕ್ಕೆ ತರಲಾಗಿದೆ. ಉಗ್ರವಾದಕ್ಕೆ ಸೇರಲು ಯುವಕರು ಹಿಂಜರಿಯುತ್ತಿದ್ದಾರೆ. ಕಣಿವೆಯಲ್ಲಿ ಶಾಂತಿ ನೆಲೆಸುತ್ತಿದೆ. ವಿಶೇಷ ಪಡೆಯನ್ನು ಬಳಸಿ, ಕಾರ್ಯಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
