ರಾಜ್ಯದಲ್ಲಿ ಬಂದ್ ಶಾಂತಿಯುತವಾಗಿದೆ: ಗೃಹ ಸಚಿವರು

First Published 25, Jan 2018, 1:12 PM IST
Band is Successful in Statewide says Home Minister
Highlights

ರಾಜ್ಯದಲ್ಲಿ ಬಂದ್ ಬಹುತೇಕ ಶಾಂತಿಯುತವಾಗಿ ನಡೆದಿದೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ ರೌಡಿ ಚಟುವಟಿಕೆ ಹಿನ್ನೆಲೆಯುಳ್ಳವರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿತ್ತು ಎಂದು ಹೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಬೆಂಗಳೂರು (ಜ.25): ರಾಜ್ಯದಲ್ಲಿ ಬಂದ್ ಬಹುತೇಕ ಶಾಂತಿಯುತವಾಗಿ ನಡೆದಿದೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ ರೌಡಿ ಚಟುವಟಿಕೆ ಹಿನ್ನೆಲೆಯುಳ್ಳವರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿತ್ತು ಎಂದು ಹೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಪ್ರತಿಭಟನೆ ಜೋರಾಗಿದೆ.  ಬಿಜೆಪಿ ಸರ್ಕಾರಿ ಪ್ರಾಯೋಜಿತ ಬಂದ್ ಅಂತ ಆರೋಪ ಮಾಡುತ್ತಿದೆ.  ಆದರೆ ಸರ್ಕಾರಕ್ಕೂ ಬಂದ್'ಗೂ ಯಾವುದೇ ಸಂಬಂಧವಿಲ್ಲ.  ಯಾವುದೇ ಸರ್ಕಾರವಾಗಲಿ ಬಂದ್'ಗೆ ಬೆಂಬಲ ನೀಡುವುದಿಲ್ಲ.  ಬೇರೆ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಹಾಗಂತ ಅಲ್ಲೇನು ಬಂದ್ , ಗಲಾಟೆ ಏನು ಆಗೋದೆ ಇಲ್ವಾ? ಅವರ ಅಧ್ಯಕ್ಷರು ಪ್ರತಿ ಬಾರಿ ಬರ್ತಾನೆ ಇರ್ತಾರೆ ಹಾಗಂತ ಪ್ರತಿ ಭಾರಿ ಬಂದ್ ಮಾಡೋಕೆ ಆಗುತ್ತಾ..? ಎಂದು ಗೃಹ ಸಚಿವರು ಪ್ರಶ್ನಿಸಿದ್ದಾರೆ.

ಮಹದಾಯಿ ವಿಚಾರವಾಗಿ ಸರ್ಕಾರ ಏನೆಲ್ಲಾ ಮಾಡ್ಬೇಕೋ ಅದನ್ನೆಲ್ಲಾ ಮಾಡಿದೆ ಆದ್ರೆ ಬಿಜೆಪಿ ಜನರ ಕಣ್ಣಿಗೆ ಮಣ್ಣೆರಚಿದೆ. ಗೋವಾ ಮಿನಿಸ್ಟರ್ ಒಬ್ಬ ಕರ್ನಾಟಕದವರನನ್ನು ಹರಾಮಿ ಅಂತಾರೆ. ಇದೆಲ್ಲಾ ಬಿಜೆಪಿಯವರಿಗೆ ಬೇಕಾಗಿತ್ತಾ ಹೇಳಿ? ಸುಖಾಸುಮ್ಮನೆ ಸರಕಾರದ ವಿರುದ್ಧ ಆರೋಪ  ಮಾಡುವುದು ಸರಿಯಲ್ಲ ಎಂದು ಸುವರ್ಣನ್ಯೂಸ್ ಗೆ ಗೃಹಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

loader