ಇವಿಎಂ ಬಗ್ಗೆ ಅರವಿಂದ್ ಕೇಜ್ರಿವಾಲ್ ಆರೋಪವನ್ನು ಅಣ್ಣಾ ಹಜಾರೆ ತಳ್ಳಿ ಹಾಕಿದ್ದಾರೆ.  ಬ್ಯಾಲೆಟ್ ಪೇಪರ್ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಮತ್ತು ಇದು ಹಳೆಯ ಕ್ರಮ ಎಂದಿದ್ದಾರೆ.

ನವದೆಹಲಿ (ಮಾ.15): ಎವಿಎಂ ಬಗ್ಗೆ ಅರವಿಂದ್ ಕೇಜ್ರಿವಾಲ್ ಆರೋಪವನ್ನು ಅಣ್ಣಾ ಹಜಾರೆ ತಳ್ಳಿ ಹಾಕಿದ್ದಾರೆ. ಬ್ಯಾಲೆಟ್ ಪೇಪರ್ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಮತ್ತು ಇದು ಹಳೆಯ ಕ್ರಮ ಎಂದಿದ್ದಾರೆ.

ಜಗತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಆದರೆ ನಾವಿಲ್ಲಿ ಬ್ಯಾಲೆಟ್ ಪೇಪರ್ ಕಡೆ ಹಿಂತಿರುಗುವ ಬಗ್ಗೆ ಮಾತನಾಡುತ್ತಿದ್ದೇವೆ. ಇಡೀ ಜಗತ್ತು ಇವಿಎಂ ಯಂತ್ರಗಳನ್ನು ಬಳಸುತ್ತಿದೆ. ಬ್ಯಾಲೆಟ್ ಪೇಪರ್ ಗಿಂತ ಿದು ಉತ್ತಮ ಆಯ್ಕೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

ಟೋಟಲೈಸರ್ ಯಂತ್ರಗಳನ್ನು ಬಳಸಿದರೆ ಅಕ್ರಮವನ್ನು ತಡೆಯಬಹುದು. ಈ ಬಗ್ಗೆ ಸಾಕಷ್ಟು ಬಾರಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇವೆ. ಟೋಟಲೈಸರ್ ಯಂತ್ರಗಳನ್ನು ಖರೀದಿಸುವಂತೆ ಚುನಾವಣಾ ಆಯೋಗ ಸರ್ಕಾರಕ್ಕೆ ಕೇಳಿದೆ. ಪ್ರಾಥಮಿಕ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.