ಸಿಲಿಕಾನ್ ಸಿಟಿಯ ಪ್ರವಾಸಿ ತಾಣ, ಹಸಿರಿನ ಉದ್ಯಾನ ಕಬ್ಬನ್ ಪಾರ್ಕ್​. ಕಬ್ಬನ್ ಪಾರ್ಕ್​ ಅಂತಿದ್ದಾಗೆ ಪ್ರೇಮಿಗಳಿಗೆ ಹಸಿರಿನ ಸಿರಿ ನೆನಪಾದರೆ, ಜ್ಞಾನಿಗಳಿಗೆ ಗ್ರಂಥಾಲಯ ನೆನಪಾಗುತ್ತದೆ. ಆದರೆ ಚಿನಕುರಳಿ ಪಟಾಕಿಯಂತ ಮಕ್ಕಳಿಗೆ ಬಾಲಭವನ ನೆನಪಾಗುತ್ತದೆ. ಚಿಣ್ಣರು ಹಾಡಿ, ಕುಣಿದು ಕುಪ್ಪಳಿಸುವುದಕ್ಕಾಗಿ ಬಾಲಭವನಕ್ಕೆ ಬರುತ್ತಾರೆ. ಆದರೆ ನಿಜವಾಗಲೂ ಬಾಲಭವನ ಎಷ್ಟು ಸೇಫ್ ಎನ್ನುವುದು ಒಳಗೆ ಹೋದವರಿಗೆ ಮಾತ್ರ ತಿಳಿಯುತ್ತದೆ.

ಬೆಂಗಳೂರು(ಜ.19): ಸಿಲಿಕಾನ್ ಸಿಟಿಯ ಪ್ರವಾಸಿ ತಾಣ, ಹಸಿರಿನ ಉದ್ಯಾನ ಕಬ್ಬನ್ ಪಾರ್ಕ್​. ಕಬ್ಬನ್ ಪಾರ್ಕ್​ ಅಂತಿದ್ದಾಗೆ ಪ್ರೇಮಿಗಳಿಗೆ ಹಸಿರಿನ ಸಿರಿ ನೆನಪಾದರೆ, ಜ್ಞಾನಿಗಳಿಗೆ ಗ್ರಂಥಾಲಯ ನೆನಪಾಗುತ್ತದೆ. ಆದರೆ ಚಿನಕುರಳಿ ಪಟಾಕಿಯಂತ ಮಕ್ಕಳಿಗೆ ಬಾಲಭವನ ನೆನಪಾಗುತ್ತದೆ. ಚಿಣ್ಣರು ಹಾಡಿ, ಕುಣಿದು ಕುಪ್ಪಳಿಸುವುದಕ್ಕಾಗಿ ಬಾಲಭವನಕ್ಕೆ ಬರುತ್ತಾರೆ. ಆದರೆ ನಿಜವಾಗಲೂ ಬಾಲಭವನ ಎಷ್ಟು ಸೇಫ್ ಎನ್ನುವುದು ಒಳಗೆ ಹೋದವರಿಗೆ ಮಾತ್ರ ತಿಳಿಯುತ್ತದೆ.

ನಮ್ಮ ಕಬ್ಬನ್ ಪಾರ್ಕ್​ ನ ಬಾಲಭವನದಲ್ಲಿ. ಸುಮಾರು ಹತ್ತು ಅಡಿ ಆಳವಿರುವ ಈ ಕೊಳದಲ್ಲಿ, ಲೈಫ್ ಜಾಕೆಟ್ ಇಲ್ಲದೇನೆ ಬೋಟಿಂಗ್ ಮಾಡಿಸುತ್ತಾರೆ. ಜೊತೆಗೆ ಈ ಕೊಳದ ನೀರು ಕೂಡ ಸಂಪೂರ್ಣ ಹಾಳಾಗಿದೆ. ಪಾಚಿ ಕಟ್ಟಿರುವ ನೀರಲ್ಲೇ ಬೋಟಿಂಗ್ ಮಾಡಿಸುತ್ತಿದ್ದರೂ, ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ.

ಬಾಲಭವನದ ಸ್ವಚ್ಛತೆಗೆ ಯಾರು ಹೊಣೆ ?: ನಿಯಮಗಳನ್ನು ಗಾಳಿಗೆ ತೂರಿದ್ರಾ ಅಧಿಕಾರಿಗಳು?

ಬಾಲಭವನದ ಈ ಸ್ಥಿತಿ ನೋಡ್ತಿದ್ರೆ ಇಂತಹ ಅನುಮಾನಗಳು ಬರೋದು ಸಹಜ. ಬೋಟಿಂಗ್ ಪ್ರದೇಶದಲ್ಲಿ ಕಸ ಹಾಕಬಾರದು ಅಂತಾ ಬೋರ್ಡ್ ಇದ್ದರೂ ಸ್ವಚ್ಛತೆ ಕಾಪಾಡಿಲ್ಲ. ಅಲ್ಲಿರುವ ಕಲ್ಲುಬೆಂಚು, ಛತ್ರಿ ಎಲ್ಲವೂ ರಿಪೇರಿ. ಅರ್ಧದಷ್ಟು ಬೋಟ್ ಗಳು ಕೆಟ್ಟು ನಿಂತಿದ್ರೆ, ನೀರು ಸಂಪೂರ್ಣ ಪಾಚಿಯಿಂದ ಗಬ್ಬೆದ್ದು ನಾರುತ್ತಿದೆ. ಇಷ್ಟಾದರೂ ಯಾವುದೇ ಸುರಕ್ಷತಾ ಕ್ರಮ ತೆಗೆದುಕೊಳ್ಳದೆ ಬೋಟಿಂಗ್ ಗೆ ಅನುವು ಮಾಡಿಕೊಟ್ಟಿದ್ದಾರೆ ಅಧಿಕಾರಿಗಳು.

ಒಟ್ನಲ್ಲಿ ನಿತ್ಯ ಚಿಣ್ಣರಿಂದ ಕಿಚಿಗುಡುವ ಬಾಲಭವನ, ವೀಕೆಂಡ್ ಬಂತೆಂದ್ರೆ ಸಾವಿರಾರು ಪ್ರವಾಸಿಗರಿಂದ ತುಂಬಿರುತ್ತೆ. ಆದ್ರೆ ಮಕ್ಕಳ ಎಂಜಾಯ್ ಮೆಂಟ್ ಗೆ ಪ್ರೋತ್ಸಾಹ ನೀಡೋಕೆ ಬಂದ ಪೋಷಕರನ್ನ, ಬಾಲಭವನದ ಸ್ಥಿತಿ ಬೆಚ್ಚಿಬೀಳೀಸೋದಂತು ಸತ್ಯ. ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೆ ಎಚ್ಚೆತ್ತುಕೊಂಡರೆ ಮುಂದಾಗುವ ಅನಾಹುತಗಳು ತಪ್ಪ ಬಹುದು.