ಬಕ್ರೀದ್ ಹಿನ್ನೆಲೆಯಲ್ಲಿ ಭದ್ರತೆ ಮತ್ತು ವ್ಯವಸ್ಥೆಗೆ ಸಂಬಂಧಿಸಿ ಮುಸ್ಲಿಂ ಮುಖಂಡರು ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಬೆಂಗಳೂರು[ಆ. 02] ಟಿಪ್ಪು ಸುಲ್ತಾನ್ ಜಯಂತಿಯನ್ನು ರಾಜ್ಯ ಸರ್ಕಾರ ರದ್ದು ಮಾಡಿ ಆದೇಶ ನೀಡಿದೆ. ಇದಾದ ನಂತರದಲ್ಲಿ ಬಕ್ರೀದ್ ಹಬ್ಬಕ್ಕೆ ಭದ್ರತೆ ಕೇಳಿ ಸಿಎಂಗೆ ಪತ್ರ ಬರೆಯಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಕ್ರೀದ್ ಹಬ್ಬದ ಆಚರಣೆ ಹಿನ್ನೆಲೆ ಪೊಲೀಸ್ ಹಾಗೂ ಜಿಲ್ಲಾಡಳಿತದಿಂದ ರಕ್ಷಣೆಗೆ ಮನವಿ ಮಾಡಿರುವ ಶಾಸಕರು ಸೇರಿದಂತೆ ಅಲ್ಪ ಅಸಂಖ್ಯಾತ ಜನಪ್ರತಿನಿಧಿಗಳು ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಶಾಸಕ‌ ತನ್ವೀರ್ ಸೇಠ್ ನೇತೃತ್ವದಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪಗೆ ಪತ್ರ ಬರೆಯಲಾಗಿದೆ. ಇದೇ ತಿಂಗಳು 12 ರಂದು ರಾಜ್ಯಾದ್ಯಂತ ಬಕ್ರೀದ್ ಆಚರಣೆ ಮಾಡಲಾಗುತ್ತಿದೆ.

ಎಲ್ಲಾ ಮುಸ್ಲಿಮರು ಹಬ್ಬ ಆಚರಣೆ ಮಾಡಲೇಬೇಕಾಗಿದೆ. ಬಕ್ರೀದ್ ಹಿನ್ನೆಲೆಯಲ್ಲಿ ಪ್ರಾಣಿಗಳ ಸಾಗಾಟಕ್ಕೆ ಅನುವು ಮಾಡಿ ಕೊಡಬೇಕು. ಪೊಲೀಸರು ಪರಿಶೀಲನೆ ಹೆಸರಲ್ಲಿ ತೊಂದರೆ ಕೊಡಬಾರದು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.