ಭಜರಂಗದಳದಿಂದ ಮಹಿಳೆ ಬೆರಳು, ಮಗನ ಮೂಳೆ ಕಟ್‌!

First Published 7, Mar 2018, 10:07 AM IST
Bajrang Dal men Chop Womans Fingers break sons hands in Gujarat
Highlights

ಮನೆ ಬಿಟ್ಟು ಹೊರ ಬಾರದಂತೆ ನೀಡಿದ ಎಚ್ಚರಿಕೆ ಮೀರಿದ ಮುಸ್ಲಿಂ ಸಮುದಾಯದ ಮಹಿಳೆಯೊಬ್ಬರ ಕೈ ಬೆರಳು ಮತ್ತು ಆಕೆಯ ಪುತ್ರನ ಕೈ ಮೂಳೆಯನ್ನು ಭಜರಂಗದಳದವರು ಎನ್ನಲಾದ ಕೆಲ ವ್ಯಕ್ತಿಗಳು ಮುರಿದ ಘಟನೆ ಗುಜರಾತ್‌ನಲ್ಲಿ ನಡೆದಿದೆ. ರೋಷಾನಾಬೀವಿ (52) ಎಂಬುವರ ಎಡಗೈ ಹೆಬ್ಬೆರಳು, ತೋರುಬೆರಳು ಮತ್ತು ಮಧ್ಯದ ಬೆರಳುಗಳನ್ನು ಕತ್ತರಿಸಿ ಹಾಕಲಾಗಿದೆ.

ಅಹಮದಾಬಾದ್‌: ಮನೆ ಬಿಟ್ಟು ಹೊರ ಬಾರದಂತೆ ನೀಡಿದ ಎಚ್ಚರಿಕೆ ಮೀರಿದ ಮುಸ್ಲಿಂ ಸಮುದಾಯದ ಮಹಿಳೆಯೊಬ್ಬರ ಕೈ ಬೆರಳು ಮತ್ತು ಆಕೆಯ ಪುತ್ರನ ಕೈ ಮೂಳೆಯನ್ನು ಭಜರಂಗದಳದವರು ಎನ್ನಲಾದ ಕೆಲ ವ್ಯಕ್ತಿಗಳು ಮುರಿದ ಘಟನೆ ಗುಜರಾತ್‌ನಲ್ಲಿ ನಡೆದಿದೆ. ರೋಷಾನಾಬೀವಿ (52) ಎಂಬುವರ ಎಡಗೈ ಹೆಬ್ಬೆರಳು, ತೋರುಬೆರಳು ಮತ್ತು ಮಧ್ಯದ ಬೆರಳುಗಳನ್ನು ಕತ್ತರಿಸಿ ಹಾಕಲಾಗಿದೆ.

ಅಲ್ಲದೆ, ಆಕೆಯ ಪುತ್ರ ಫರ್ಜಾನ್‌(32) ಎರಡು ಕೈಗಳ ಮೂಳೆ ಮುರಿದು ಹಾಕಿದ್ದಾರೆ. 1992ರ ಬಾಬ್ರಿ ಮಸೀದಿ ಧ್ವಂಸದ ನೆನಪಿನಾರ್ಥವಾಗಿ ಡಿಸೆಂಬರ್‌ 6ರಿಂದ ಬಜರಂಗ ಮೆರವಣಿಗೆ ಆರಂಭವಾದಾಗಿನಿಂದಲೂ, ಇಲ್ಲಿ ಎರಡು ಕೋಮುಗಳ ನಡುವಿನ ರಾಗ-ವೈಷಮ್ಯ ಮುಂದುವರಿದಿದೆ.

ಭಾನುವಾರ ರಾತ್ರಿ ಮತ್ತೆ ಗ್ರಾಮದಲ್ಲಿ ಹಿಂಸಾಚಾರ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಮನೆ ಬಿಟ್ಟು ಹೊರಬರದಂತೆ ಭಜರಂಗದಳ ಕಾರ್ಯಕರ್ತರು ಮುಸ್ಲಿಮರಿಗೆ ಎಚ್ಚರಿಕೆ ನೀಡಿದ್ದರು. ಇದರ ಹೊರತಾಗಿಯೂ ಮಹಿಳೆ ಮತ್ತು ಆಕೆಯ ಪುತ್ರ ಜಾನುವಾರು ಮೇಯಿಸಲು ಹೊರಗೆ ಬಂದಿದ್ದಾಗ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

loader