ಸ್ಟೇಷನ್​ ಜಾಮೀನನ ಮೇಲೆ ದುನಿಯಾ ವಿಜಯ್​ ಬಿಡುಗಡೆಯಾಗಿದ್ದಾರೆ. 

ಬೆಂಗಳೂರು(ನ.15): ಮಾಸ್ತಿಗುಡಿ ದುರಂತದ ಬಳಿಕ ದುನಿಯಾ ವಿಜಿಗೆ ಹೊಸ ಸಂಕಷ್ಟವೊಂದು ಎದುರಾಗಿದ್ದು, ಇಂದು ಬಂಧನಕ್ಕೆ ಒಳಗಾಗಿದ್ದ ವಿಜಿಗೆ ಸಂಜೆ ಜಾಮೀನು ಸಿಕ್ಕಿದೆ.

ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಪಿ.ಸುಂದರ್‌ ಅವರ ಅಣ್ಣನ ಮಾವನ ಮೇಲೆ ಗಂಭೀರ ಹಲ್ಲೆ ನಡೆಸಿದ ಆರೋಪದ ಹಿನ್ನಲೆಯಲ್ಲಿ ಬಂಧನಕ್ಕೆ ಗುರಿಯಾಗಿದ್ದ ವಿಜಯ್'ಗೆ ಸದ್ಯ ಜಾಮೀನು ದೊರಕಿದೆ. ಸ್ಟೇಷನ್​ ಜಾಮೀನನ ಮೇಲೆ ದುನಿಯಾ ವಿಜಯ್​ ಬಿಡುಗಡೆಯಾಗಿದ್ದಾರೆ.