ನಾವು ಸಿನಿಮಾ ರೀತಿಯಲ್ಲಿ ಮದುವೆ ಮಾಡಿಕೊಳ್ಳುವುದನ್ನು ಕೇಳಿದ್ದೀವಿ, ನೋಡಿದ್ದೀವಿ. ಆದ್ರೆ ಇಲ್ಲೊಬ್ಬ ಸಿನಿಮೀಯ ರೀತಿಯಲ್ಲಿ ತನ್ನ ಹುಟ್ಟುಹಬ್ಬವನ್ನು ಮಾಡಿಕೊಂಡಿದ್ದಾನೆ.
ಕೊಯಮತ್ತೂರ್(ಆ.16): ನಾವು ಸಿನಿಮಾ ರೀತಿಯಲ್ಲಿ ಮದುವೆ ಮಾಡಿಕೊಳ್ಳುವುದನ್ನು ಕೇಳಿದ್ದೀವಿ, ನೋಡಿದ್ದೀವಿ. ಆದ್ರೆ ಇಲ್ಲೊಬ್ಬ ಸಿನಿಮೀಯ ರೀತಿಯಲ್ಲಿ ತನ್ನ ಹುಟ್ಟುಹಬ್ಬವನ್ನು ಮಾಡಿಕೊಂಡಿದ್ದಾನೆ.
ಹೌದು ಕೊಯಮತ್ತೂರ್ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಎಂ. ಗೋಕುಲಂ ತಂಗರಾಜ್ ತಮ್ಮ ಹುಟ್ಟುಹಬ್ಬವನ್ನು ಬಾಹುಬಲಿ ಸಿನಿಮಾ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. ತಂಗರಾಜ್ ಅವರು ಗೋಕುಲಂ ಗಾರ್ಡನ್ ರಿಯೆಲ್ಏಸ್ಟೇಟ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಇನ್ನು ಆಲ್ ಇಂಡಿಯಾ ಲ್ಯಾಂಡ್, ಹೌಸ್ ಮತ್ತು ಪ್ಲಾಟ್ ಡೆವಲಪರ್ಸ್ ಅಸೋಸಿಯೇಶನ ರಾಜ್ಯಾಧ್ಯಕ್ಷರಾಗಿದ್ದಾರೆ.
ಅದೇನೆ ಇದ್ದರೂ ಈಗ ತಂಗರಾಜ್ ತಮ್ಮ ಹುಟ್ಟುಹಬ್ಬ ಆಚರಣೆಯ ವಿಡಿಯೋ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
