ಈಗಷ್ಟೆ ಈ ಚಿತ್ರಕ್ಕೆ ಮುಹೂರ್ತ ಆಗಿದೆ. ಸಿನಿಮಾದೊಳಗೊಂದು ಸಿನಿಮಾ ಕತೆಯನ್ನು ಹೇಳುವ ಚಿತ್ರ ಇದು.
ಕನ್ನಡಕ್ಕೆ ‘ಬಾಹುಬಲಿ’ಯ ಆಗಮನವಾಗುತ್ತಿದೆ! ಇನ್ನೇನು ಗಾಂನಗರದಲ್ಲಿ ಬಾಹುಬಲಿಯ ಹವಾ ಸದ್ಯದಲ್ಲೇ ಸೃಷ್ಟಿಯಾಗಲಿದೆ. ವಿಶೇಷವೆಂದರೆ, ಕನ್ನಡದ ಈ ಬಾಹುಬಲಿಗೆ ಹೀರೋ ಆಗುವ ಬಿಗ್‌ಚಾನ್ಸ್ ಸಿಕ್ಕಿರೋದು ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್! ಅಚ್ಚರಿ ಆಗಬಹುದಲ್ವೇ? ವಿಜಯ್‌ಗೆ ಸಿಕ್ಸ್‌ಪ್ಯಾಕ್ ಇಲ್ಲ. ಕಟ್ಟುಮಸ್ತಾದ ಬಾಡಿಯೂ ಇಲ್ಲ. ಆರಡಿ ಹೈಟೂ ಇಲ್ಲ. ಹಾಗಿದ್ದರೂ ಅವರು ಹೇಗೆ ಬಾಹುಬಲಿಯಾದರು? ಬಾಹುಬಲಿಗೂ ಸಂಚಾರಿ ವಿಜಯ್‌ಗೂ ಯಾಕೋ ಸಿಂಕ್ ಆಗ್ತಿಲ್ವಲ್ಲಾ ಎನ್ನುವ ಗುಮಾನಿಯ ಬರುತ್ತದೆ ಅಲ್ವಾ?
ಆದರೆ, ಈ ವಿಷಯ ರಾಜವೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರದ ರಿಮೇಕ್ ಕುರಿತು ಅಲ್ಲ. ಕನ್ನಡದವರೇ ಆದ ಬಾಹುಬಲಿ ಹೆಸರಿನ ನಿರ್ದೇಶಕನ ಸುದ್ದಿ! ಬಾಹುಬಲಿ ಎಂಬವರು ನಿರ್ದೇಶಿಸುತ್ತಿರುವ ‘ನನ್ ಮಗಳೇ ಹಿರೋಯಿನ್’ ಎನ್ನುವ ಚಿತ್ರಕ್ಕೆ ಸಂಚಾರಿ ವಿಜಯ್ ನಾಯಕ! ಈಗಷ್ಟೆ ಈ ಚಿತ್ರಕ್ಕೆ ಮುಹೂರ್ತ ಆಗಿದೆ. ಸಿನಿಮಾದೊಳಗೊಂದು ಸಿನಿಮಾ ಕತೆಯನ್ನು ಹೇಳುವ ಚಿತ್ರ ಇದು. ಇದು ‘ಬಾಹುಬಲಿ’ ಚಿತ್ರದಿಂದ ಸೂರ್ತಿ ಪಡೆದು ಇಟ್ಟ ಹೆಸರಲ್ಲ. ‘ಬಾಹುಬಲಿ’ ಎನ್ನುವುದು ಹೆತ್ತವರೇ ಶಾಸೋಕ್ತವಾಗಿ ನಾಮಕರಣ ಮಾಡಿರುವ ಹೆಸರಿದು.
