ಈಗಾಗಲೇ ಅತಿಹೆಚ್ಚು ಲೈಕ್ ಪಡೆದ ಮತ್ತು ವೀಕ್ಷಣೆಯಾದ ಟ್ರೈಲರ್ ಎಂಬ ಖ್ಯಾತಿಗೆ ಪಾತ್ರವಾದ ಬಾಹುಬಲಿ-2 ಮತ್ತೊಂದು ಮೈಲಿಗಲ್ಲಿಗೆ ಅಣಿಯಾಗಿದೆ.

ಹೈದ್ರಾಬಾದ್(ಮಾ.23): ಕಳೆದ ವರ್ಷ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ ಅವರ ಬಾಹುಬಲಿ ಚಿತ್ರದ ಭಾಗ 2ರ ಬಿಡುಗಡೆಗಾಗಿ ವಿಶ್ವಾದ್ಯಂತ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗಾಗಲೇ ಅತಿಹೆಚ್ಚು ಲೈಕ್ ಪಡೆದ ಮತ್ತು ವೀಕ್ಷಣೆಯಾದ ಟ್ರೈಲರ್ ಎಂಬ ಖ್ಯಾತಿಗೆ ಪಾತ್ರವಾದ ಬಾಹುಬಲಿ-2 ಮತ್ತೊಂದು ಮೈಲಿಗಲ್ಲಿಗೆ ಅಣಿಯಾಗಿದೆ.

ರಾಷ್ಟ್ರಾದ್ಯಂತ ಏ.28ರಂದು 6,500 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ‘ಬಾಹುಬಲಿ-2’ ದೇಶದಲ್ಲೇ ಹೆಚ್ಚು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಮೊದಲ ಚಿತ್ರ ಎಂಬ ಖ್ಯಾತಿಯನ್ನು ಮುಡಿಗೇರಿಸಿಕೊಳ್ಳಲಿದೆ.

ಬಾಹುಬಲಿಯ ಮೊದಲಾರ್ಧದಲ್ಲಿ ₹400 ಕೋಟಿ ಗಳಿಕೆ ಮಾಡಿದ್ದ ಚಿತ್ರ, ಅದಕ್ಕಿಂತ ಹೆಚ್ಚು ಲಾಭ ಗಳಿಕೆ ಮಾಡಲಿದೆ ಎಂದು ಅಂದಾಜಿಸಲಾಗಿದೆ.