ನವೆಂಬರ್​ 8ರಿಂದ 14 ರವರೆಗೆ ಜಿಲ್ಲೆಯ ವಿವಿಧ ಸಂಸ್ಥೆಗಳಿಂದ ಕೇಂದ್ರ ಸಹಕಾರಿ ಬ್ಯಾಂಕ್​ಗೆ ಒಟ್ಟು 162 ಕೋಟಿ ರೂಪಾಯಿ ಹಣ ಜಮಾ ಆಗಿರುವ ಮಾಹಿತಿ ಸಿಕ್ಕಿದೆ. ಈ ಅಪೆಕ್ಸ್ ಬ್ಯಾಂಕ್​ ಮೂಲಕ  ಮಾಹಿತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ಡಿಸಿಸಿ ಬ್ಯಾಂಕ್ ಅಡಿಯಲ್ಲಿ ಒಟ್ಟು 1,115 ವಿವಿಧ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು  25 ಲಕ್ಷಕ್ಕೂ ಅಧಿಕವಾಗಿ ಹಣ ಠೇವಣಿ ಮಾಡಿದ ಸಂಸ್ಥೆಗಳ ಮೇಲೆ ನಿಗಾ ಇಡಲಾಗಿದೆ. ಇನ್ನು ಡಿಸಿಸಿ ಬ್ಯಾಂಕ್​ನಲ್ಲಿ ಯಾವುದೇ ರಾಜಕೀಯ ನಾಯಕರು ಹಣ ಜಮೆ ಮಾಡಿಲ್ಲ ಅಂತ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ್​ ಸ್ಪಷ್ಟನೆ ನೀಡಿದ್ದಾರೆ.

ಬಾಗಲಕೋಟೆ(ಡಿ.26): ನೋಟ್​ ಬ್ಯಾನ್​ ಬಳಿಕ ಕಪ್ಪು ಕುಳಗಳ ಮೇಲೆ ಎಸಿಬಿ ಹಾಗೂ ಇಡಿ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ. ಬಾಗಲಕೋಟೆ ಡಿಸಿಸಿ ಬ್ಯಾಂಕ್​ಗೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಕೆಲವು ರಾಜಕಾರಣಿಗಳು ಈ ಬ್ಯಾಂಕ್​ ಆಡಳಿತ ಮಂಡಳಿ ಸದಸ್ಯರಾಗಿರೋ ಕಾರಣ ಹಣ ಜಮೆ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಎಸ್​.ಆರ್.ಪಾಟೀಲ್​, ಎಚ್.ವೈ.ಮೇಟಿ, ಹನಮಂತ ನಿರಾಣಿ, ಕಾಶಪ್ಪನವರ್​ ಸೇರಿದಂತೆ ಪ್ರಮುಖ ರಾಜಕೀಯ ಮುಖಂಡರು ಈ ಬ್ಯಾಂಕ್​ನ ಆಡಳಿತ ಮಂಡಳಿ ಸದಸ್ಯರಾಗಿದ್ದಾರೆ. ಇನ್ನು ನವೆಂಬರ್​ 8ರಿಂದ 14 ರವರೆಗೆ ಜಿಲ್ಲೆಯ ವಿವಿಧ ಸಂಸ್ಥೆಗಳಿಂದ ಕೇಂದ್ರ ಸಹಕಾರಿ ಬ್ಯಾಂಕ್​ಗೆ ಒಟ್ಟು 162 ಕೋಟಿ ರೂಪಾಯಿ ಹಣ ಜಮಾ ಆಗಿರುವ ಮಾಹಿತಿ ಸಿಕ್ಕಿದೆ. ಈ ಅಪೆಕ್ಸ್ ಬ್ಯಾಂಕ್​ ಮೂಲಕ ಮಾಹಿತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ಡಿಸಿಸಿ ಬ್ಯಾಂಕ್ ಅಡಿಯಲ್ಲಿ ಒಟ್ಟು 1,115 ವಿವಿಧ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು 25 ಲಕ್ಷಕ್ಕೂ ಅಧಿಕವಾಗಿ ಹಣ ಠೇವಣಿ ಮಾಡಿದ ಸಂಸ್ಥೆಗಳ ಮೇಲೆ ನಿಗಾ ಇಡಲಾಗಿದೆ. ಇನ್ನು ಡಿಸಿಸಿ ಬ್ಯಾಂಕ್​ನಲ್ಲಿ ಯಾವುದೇ ರಾಜಕೀಯ ನಾಯಕರು ಹಣ ಜಮೆ ಮಾಡಿಲ್ಲ ಅಂತ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ್​ ಸ್ಪಷ್ಟನೆ ನೀಡಿದ್ದಾರೆ.