Asianet Suvarna News Asianet Suvarna News

ತೆರಿಗೆ ವಿನಾಯಿತಿಗಾಗಿ ಮನೆಗಳನ್ನು ಬಾಡಿಗೆಗೆ ನೀಡುತ್ತಿರುವವರಿಗೆ ಕಹಿ ಸುದ್ದಿ

ತೆರಿಗೆಯಿಂದ ಬಚಾವ್ ಆಗಲು ಹೊಸ ಮನೆ ಅಥವಾ ಫ್ಲ್ಯಾಟ್ ಖರೀದಿಸಿ ಬಾಡಿಗೆಗೆ ನೀಡುವ ಯೋಚನೆಯಲ್ಲಿದ್ದೀರಾ? ಹಾಗಾದ್ರೆ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿರುವ ಬಜೆಟ್ 2017-18ರ ಹೊಸ ನಿಯಮವನ್ನು ನೀವು ತಿಳಿದುಕೊಳ್ಳಲೇಬೇಕು. ಇನ್ಮುಂದೆ ನೀವು ಈ ಮೊದಲಿನಂತೆ ಲೋನ್ ಪಡೆದು ತೆರಿಗೆ ವಿನಾಯಿತಿ ಪಡೆಯಲು ಸಾಧ್ಯವೇ ಇಲ್ಲ. ಇದು ಹೇಗಂತೀರಾ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ

Bad News To Those Who Wants To Take Home Loans

ನವದೆಹಲಿ(ಮಾ.14): ತೆರಿಗೆಯಿಂದ ಬಚಾವ್ ಆಗಲು ಹೊಸ ಮನೆ ಅಥವಾ ಫ್ಲ್ಯಾಟ್ ಖರೀದಿಸಿ ಬಾಡಿಗೆಗೆ ನೀಡುವ ಯೋಚನೆಯಲ್ಲಿದ್ದೀರಾ? ಹಾಗಾದ್ರೆ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿರುವ ಬಜೆಟ್ 2017-18ರ ಹೊಸ ನಿಯಮವನ್ನು ನೀವು ತಿಳಿದುಕೊಳ್ಳಲೇಬೇಕು. ಇನ್ಮುಂದೆ ನೀವು ಈ ಮೊದಲಿನಂತೆ ಲೋನ್ ಪಡೆದು ತೆರಿಗೆ ವಿನಾಯಿತಿ ಪಡೆಯಲು ಸಾಧ್ಯವೇ ಇಲ್ಲ. ಇದು ಹೇಗಂತೀರಾ ಅಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ

ಕೇಂದ್ರ ಸರ್ಕಾರದ ಹೊಸ ನಿಯಮದನ್ವಯ ಹೊಸ ಮನೆಗೆಂದು ತೆಗೆದ ಲೋನ್'ಗೆ ಹೆಚ್ಚೆಂದರೆ 2 ಲಕ್ಷದಷ್ಟು ತೆರಿಗೆ ವಿನಾಯಿತಿ ಪಡೆಯಬಹುದು. ಅಂದರೆ ಒಂದಕ್ಕಿಂತ ಹೆಚ್ಚು ನಿವೇಶನಗಳನ್ನು ಖರೀದಿಸಿ ಹೋಂ ಲೋನ್ ಪಡೆಯಲು ಪ್ರಯತ್ನಿಸಿ, ಆ ಮೂಲಕ ತೆರಿಗೆ ವಿನಾಯಿತಿ ಪಡೆಯಲು ಯತ್ನಿಸುವವರೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಳ್ಳಲು ತಯಾರಿಲ್ಲ ಎಂಬುವುದು ಇಲ್ಲಿ ಸ್ಪಷ್ಟವಾಗಿದೆ.   

ಹೊಸ ನಿಯಮದನ್ವಯ ಮೊದಲ ಬಾರಿ ಮನೆ ಖರೀದಿಸುವವರಿಗಷ್ಟೇ ತೆರಿಗೆ ವಿನಾಯಿತಿ ನೀಡಲು ಸರ್ಕಾರ ಯೋಚಿಸಿದೆ. ಈಗಾಗಲೇ ಮನೆ ಹೊಂದಿದ್ದು, ಮತ್ತೊಂದು ಮನೆ ಖರೀದಿಸಿ ಆ ಮೂಲಕ ಬಾಡಿಗೆ ಪಡೆಯಲು ಪ್ರಯತ್ನಿಸುವವರಿಗೆ ವಿನಾಯಿತಿ ನೀಡದಿರುವುದೇ ಕೇಂದ್ರದ ಪ್ಲಾನ್.

ಈ ಮೊದಲು ಬಾಡಿಗೆಗೆ ನೀಡಿದ ತನ್ನ ಆಸ್ತಿಯ ಆಧಾರದಲ್ಲಿ ಪೂರ್ಣ ಪ್ರಮಾಣದ ವಿನಾಯಿತಿ ಪಡೆಯುವ ಸೌಲಭ್ಯ ಮನೆ ಮಾಲಿಕನಿಗಿತ್ತು. ಆದರೆ ಮನೆ ಬಾಡಿಗೆ ಪಡೆಯುವವರು ಮಾತ್ರ ಕೇವಲ 2 ಲಕ್ಷವನ್ನಷ್ಟೇ ಪಡೆಯುವ ಹಕ್ಕು ಹೊಂದಿದ್ದರು.

ಇದೀಗ ಈ ನಿಯಮವನ್ನು ರದ್ದು ಮಾಡಿ ಹೊಸ ಕಾನೂನನ್ನು ಪರಿಚಯಿಸಿರುವ ಕೇಂದ್ರ, ಮಾಲಿಕರು ಕೂಡಾ ಬಾಡಿಗೆ ನೀಡಿದ ಮನೆಯ ಮೇಲೆ ಕೇವಲ 2 ಲಕ್ಷ ವಿನಾಯಿತಿ ಪಡೆಯುವ ಹಕ್ಕು ಹೊಂದಿರುತ್ತಾರೆ. ಅಂದರೆ ಲೋನ್ ಪಡೆದ ವ್ಯಕ್ತಿ ಆ ಮನೆಯಲ್ಲಿ ಖುದ್ದು ತಾನು ವಾಸ್ತವ್ಯವಿದ್ದರೂ ಅಥವಾ ಬಾಡಿಗೆಗೆ ನೀಡಿದರೂ ಕೇವಲ 2 ಲಕ್ಷ ವಿನಾಯಿತಿ ಪಡೆಯಲು ಅರ್ಹನಾಗಿರುತ್ತಾನೆ.

Follow Us:
Download App:
  • android
  • ios