ಹೆಣ್ಣು ಮಗು ಬಿಟ್ಟು ಹೋದ ನಿಷ್ಕರುಣಿ ತಾಯಿಪೊದೆಯಲ್ಲಿ 15 ದಿನಗಳ ಹೆಣ್ಣು ಮಗು ಪತ್ತೆಆನೇಕಲ್ ನ ಜಿಗಳ ಕ್ರಾಸ್ ಬಳಿ ಮಗು ಪತ್ತೆಅಳುತ್ತಿದ್ದ ಕಂದಮ್ಮನನ್ನು ಗಮಿಸಿದ ದಾರಿಹೋಕರುಮಗುವನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು
ಆನೇಕಲ್(ಜು.12): ತಾಯಿಯೊಬ್ಬಳು ತನ್ನ 15 ದಿನಗಳ ಹೆಣ್ಣು ಮಗುವನ್ನು ಮರದ ಕೆಳಗೆ ಇಟ್ಟು ಹೋದ ಘಟನೆ ಆನೇಕಲ್‌ನಲ್ಲಿ ನಡೆದಿದೆ.
ಆನೇಕಲ್ ತಾಲೂಕಿನ ಜಿಗಳ ಕ್ರಾಸ್ ಬಳಿ ಮರವೊಂದರ ಬಳಿ 15 ದಿನಗಳ ಹೆಣ್ಣು ಮಗು ಪತ್ತೆಯಾಗಿದ್ದು, ಮರದ ಪಕ್ಕದ ಪೊದೆಯಲ್ಲಿ ಅಳುತ್ತಿದ್ದ ಮಗುವನ್ನು ಸಾರ್ವಜನಿಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊದೆಯಿಂದ ಮಗುವಿನ ಅಳುವಿನ ಶಬ್ದ ಕೇಳಿದ ದಾರಿಹೋಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಕುರಿತು ಅತ್ತಿಬೆಲೆ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
