ಅಮ್ಮ ಅಂದ್ರೆ ಅಮ್ಮನೇ..ಹೃದಯಸ್ಪರ್ಶಿ ವಿಡಿಯೋ..!

Baby deer got so scared while crossing the road
Highlights

ತಾಯಿ-ಮಗುವಿನ ಸಂಬಂಧ ಈ ಜಗತ್ತಿನ ಅತ್ಯಂತ ಶ್ರೇಷ್ಠ ಸಂಬಂಧ ಅಂತಾರೆ. ತಾಯಿಯ ಮಡಿಲೇ ಮಗುವಿಗೆ ಸ್ವರ್ಗ, ಆಕೆಯ ಆರೈಕೆಯಲ್ಲಿ ಮಗು ರಕ್ಷಣೆಯ ಹಿತಾನುಭವ ಅನುಭವಿಸುತ್ತದೆ. ಇದಕ್ಕೆ ಪುಷ್ಠಿ ನೀಡುವಂತ ವಿಡಿಯೋ ಇಲ್ಲಿದೆ ನೋಡಿ. 

ಬೆಂಗಳೂರು(ಜೂ.2): ತಾಯಿ-ಮಗುವಿನ ಸಂಬಂಧ ಈ ಜಗತ್ತಿನ ಅತ್ಯಂತ ಶ್ರೇಷ್ಠ ಸಂಬಂಧ ಅಂತಾರೆ. ತಾಯಿಯ ಮಡಿಲೇ ಮಗುವಿಗೆ ಸ್ವರ್ಗ, ಆಕೆಯ ಆರೈಕೆಯಲ್ಲಿ ಮಗು ರಕ್ಷಣೆಯ ಹಿತಾನುಭವ ಅನುಭವಿಸುತ್ತದೆ. ಇದಕ್ಕೆ ಪುಷ್ಠಿ ನೀಡುವಂತ ವಿಡಿಯೋ ಇಲ್ಲಿದೆ ನೋಡಿ. 

ಕಾಡಂಚಿನಲ್ಲಿ ಮರಿ ಜಿಂಕೆಯೊಂದು ರಸ್ತೆ ದಾಟಲಾಗದೆ ಮಧ್ಯೆಯೇ ನಿಂತುಕೊಂಡಿತ್ತು. ಅದೇ ರಸ್ತೆಯುಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಪ್ರಯಾಣಿಕನನ್ನು ಕಂಡು ಆ ಮರಿ ಜಿಂಕೆ ಭಯಗ್ರಸ್ತವಾಗಿತ್ತು. ಇನ್ನೂ ಸರಿಯಾಗಿ ನಡೆಯಲೂ ಬರದ ಆ ಮರಿ ಜಿಂಕೆ ಸಾಹಾಯಕ್ಕಾಗಿ ಅಮ್ಮನ ದಾರಿ ನೊಡುತ್ತಿತ್ತು.

ಕಂದಮ್ಮ ಸಂಕಷ್ಟದಲ್ಲಿರುವುದನ್ನು ಅರಿತ ತಾಯಿ ಜಿಂಕೆ ಕೂಡಲೇ ರಸ್ತೆ ಮಧ್ಯೆ ಧಾವಿಸಿ ಕರುಳ ಬಳ್ಳಿಯ ರಕ್ಷಣೆಗೆ ಮುಮದಾಯಿತು. ತಾಯಿಯನ್ನು ಕಂಡೊಡನೆ ಸುರಕ್ಷಾ ಭಾವ ಅನುಭವಿಸಿದ ಮರಿ ಜಿಂಕೆ ತಕ್ಷಣವೇ ಮೇಲೆದ್ದು ಅಂಬೆಗಾಲು ಇಡುತ್ತಲೇ ರಸ್ತೆ ದಾಟಿ ಪ್ರಯಾಣಿಕನತ್ತ ನಗೆ ಬೀರಿದೆ. 

loader