ಮಹಿಳಾ ಸಂಸದರಿಗಾಗಿ ಸಂಸತ್‌ನಲ್ಲಿ ಶೀಘ್ರವೇ ಮಕ್ಕಳ ಪಾಲನಾ ಕೇಂದ್ರ

First Published 22, Feb 2018, 10:25 AM IST
Baby care centres in Parliament  for MPs Babies
Highlights

ಸಂಸತ್ತಿನಲ್ಲಿರುವ ಮಹಿಳಾ ಸಂಸದರು, ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಗೆ ಶೀಘ್ರದಲ್ಲೇ ಸಂಸತ್‌ ಭವನದ ಆವರಣದಲ್ಲೇ ಮಕ್ಕಳ ಪಾಲನಾ ಕೇಂದ್ರ ಲಭ್ಯವಾಗಲಿದೆ.

ನವದೆಹಲಿ: ಸಂಸತ್ತಿನಲ್ಲಿರುವ ಮಹಿಳಾ ಸಂಸದರು, ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಗೆ ಶೀಘ್ರದಲ್ಲೇ ಸಂಸತ್‌ ಭವನದ ಆವರಣದಲ್ಲೇ ಮಕ್ಕಳ ಪಾಲನಾ ಕೇಂದ್ರ ಲಭ್ಯವಾಗಲಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಲೋಕಸಭಾ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರಿಗೆ ಪತ್ರ ಬರೆದು ಸಂಸತ್ತಿನ ಆವರಣದಲ್ಲಿ ಮಹಿಳೆಯರು ತಮ್ಮ ಮಕ್ಕಳನ್ನು ಇರಿಸಿ ಪಾಲನೆ ಮಾಡಲು ವ್ಯವಸ್ಥೆ ಕಲ್ಪಿಸುವಂತೆ ಕೇಳಿಕೊಂಡಿದ್ದರು.

ಇದಕ್ಕೆ ಸ್ಪಂದಿಸಿರುವ ಸುಮಿತ್ರಾ ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಅದರಂತೆ ಇದೀಗ 1,500 ಚದರ ಅಡಿ ವಿಸ್ತೀರ್ಣದಲ್ಲಿ ಮಕ್ಕಳ ಪಾಲನಾ ಕೇಂದ್ರ ನಿರ್ಮಿಸಲು ನಿರ್ಧರಿಸಲಾಗಿದೆ. ತಾಯಂದಿರು ತಮ್ಮ ಮಗುವಿಗೆ ಹಾಲುಣಿಸಲು ಪ್ರತ್ಯೇಕ ಕೋಣೆ ನಿರ್ಮಿಸಲೂ ನಿರ್ಧರಿಸಲಾಗಿದೆ.

loader