ಬಾಬ್ರಿ ಮಸೀದಿ ವಿವಾದ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಈಗ ಮತ್ತೊಮ್ಮೆ ಈ ವಿಚಾರ ಮುನ್ನೆಲೆಗೆ ಬಂದಿದೆ. ಬಾಬ್ರಿ ಮಸೀದಿ ಮತ್ತು ಬಿಜೆಪಿ ನಾಯಕ ಎಲ್.ಕೆ ಅಡ್ವಾಣಿ ಸೇರಿದಂತೆ ಮುರುಳಿ ಮನೋಹರ್ ಜೋಷಿ, ಉಮಾಭಾರತಿ ಮುಂತಾದವರ ಮೇಲಿರುವ ಪಿತೂರಿ ಪ್ರಕರಣದ ನ್ಯಾಯಾಂಗ ತನಿಖೆ ನಡೆಸುವುದಾಗಿ ಸುಪ್ರೀಂಕೋರ್ಟ್ ಆದೇಶಿಸಿದೆ.
ನವದೆಹಲಿ (ಮಾ.06): ಬಾಬ್ರಿ ಮಸೀದಿ ವಿವಾದ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಈಗ ಮತ್ತೊಮ್ಮೆ ಈ ವಿಚಾರ ಮುನ್ನೆಲೆಗೆ ಬಂದಿದೆ. ಬಾಬ್ರಿ ಮಸೀದಿ ಮತ್ತು ಬಿಜೆಪಿ ನಾಯಕ ಎಲ್.ಕೆ ಅಡ್ವಾಣಿ ಸೇರಿದಂತೆ ಮುರುಳಿ ಮನೋಹರ್ ಜೋಷಿ, ಉಮಾಭಾರತಿ ಮುಂತಾದವರ ಮೇಲಿರುವ ಪಿತೂರಿ ಪ್ರಕರಣದ ನ್ಯಾಯಾಂಗ ತನಿಖೆ ನಡೆಸುವುದಾಗಿ ಸುಪ್ರೀಂಕೋರ್ಟ್ ಆದೇಶಿಸಿದೆ.
ರಾಯ್ ಬರೇಲಿಯಲ್ಲಿರುವ ಕೆಳಹಂತದ ನ್ಯಾಯಾಲಯ ಈಗಾಗಲೇ ಅಡ್ವಾಣಿ ಸೇರಿದಂತೆ ಇನ್ನಿತರರ ಮೇಲಿರುವ ಆರೋಪಪಟ್ಟಿಯನ್ನು ಕೈಬಿಟ್ಟಿದೆ.
ತಾಂತ್ರಿಕ ಕಾರಣಕ್ಕಾಗಿ ಅಡ್ವಾಣಿ ಹಾಗೂ ಇನ್ನಿತರರನ್ನು ಖುಲಾಸೆಗೊಳಿಸಲು ನಾವು ಒಪ್ಪುವುದಿಲ್ಲ. ಪಿತೂರಿ ಆರೋಪ ಸೇರಿದಂತೆ 13 ಮಂದಿಯ ಮೇಲೆ ಪೂರಕ ದೋಷಾರೋಪಪಟ್ಟಿ ಸಲ್ಲಿಸಲು ನಾವು ನಿಮಗೆ ಅವಕಾಶ ನೀಡುತ್ತೇವೆ. ಜಂಟಿ ನ್ಯಾಯಾಂಹ ತನಿಖೆ ನಡೆಸುವಂತೆ ವಿಚಾರಣಾ ನ್ಯಾಯಾಲಯದಲ್ಲಿ ನಾವು ಕೇಳುತ್ತೇವೆ ಎಂದು ಸುಪ್ರೀಂಕೋರ್ಟ್ ಸಿಬಿಐಗೆ ಹೇಳಿದೆ.
ಅಡ್ವಾಣಿ ಮತ್ತಿತರರ ಮೇಲಿರುವ ಚಾರ್ಜ್ ಶೀಟನ್ನು ಪುನಾರಾವಲೋಕಿಸುವ ಬಗ್ಗೆ ಮಾ.22 ರಂದು ಸುಪ್ರೀಂಕೋರ್ಟ್ ಅಂತಿಮ ನಿರ್ಣಯ ಕೈಗೊಳ್ಳಲಿದೆ.
