ಮೊಘಲರ ಕೊನೆಯ ದೊರೆ ಬಹಾದೂರ್ ಶಾ ಜಾಫರ್‌ನ 6ನೇ ತಲೆಮಾರಿನ ವಂಶಸ್ಥರೊಬ್ಬರು ಅಯೋಧ್ಯೆಯ ಬಾಬ್ರಿ ಮಸೀದಿ ತಮಗೆ ಸೇರಿದ್ದು ಎಂದು ಹಕ್ಕು ಮಂಡಿಸಿದ್ದಾರೆ. 

ಲಖನೌ: ಮೊಘಲರ ಕೊನೆಯ ದೊರೆ ಬಹಾದೂರ್ ಶಾ ಜಾಫರ್‌ನ 6ನೇ ತಲೆಮಾರಿನ ವಂಶಸ್ಥರೊಬ್ಬರು ಅಯೋಧ್ಯೆಯ ಬಾಬ್ರಿ ಮಸೀದಿ ತಮಗೆ ಸೇರಿದ್ದು ಎಂದು ಹಕ್ಕು ಮಂಡಿಸಿದ್ದಾರೆ.

ಹೈದರಾಬಾದ್‌ನಲ್ಲಿ ವಾಸಿಸುತ್ತಿರುವ ಯಾಕೂಬ್ ಹಬೀಬುದ್ದೀನ್ ಟುಕಿ, ತಾವು ಮುಘಲ್ ವಂಶಸ್ಥ ಎನ್ನುವುದು ಡಿಎನ್‌ಎ ಪರೀಕ್ಷೆಯಿಂದಲೂ ಸಾಬೀತಾಗಿದೆ ಎಂದು ಹೇಳಿಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿ, ‘ನನಗೆ ಬಾಬ್ರಿ ಮಸೀದಿಯ ಉಸ್ತುವಾರಿ ನೀಡಲು ಉತ್ತರ ಪ್ರದೇಶ ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿಗೆ ಅರ್ಜಿ ಸಲ್ಲಿಸಿದ್ದು, ನ.15ರ ಒಳಗೆ ಪ್ರತಿಕ್ರಿಯೆ ಬರದಿದ್ದರೆ ಸುಪ್ರೀಂಗೆ ಹೋಗುತ್ತೇನೆ’ ಎಂದು ಟುಕಿ ಹೇಳಿದ್ದಾರೆ.