ಯೋಗಗುರು ಬಾಬಾ ರಾಮ್ ದೇವ್ ಯೇ ಹೇ ಇಂಡಿಯಾ ಎನ್ನುವ ಬಾಲಿವುಡ್ ಚಿತ್ರದ ಪ್ರಮೋಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅಂದ ಹಾಗೆ ಅದೇ ಚಿತ್ರದ ಒಂದು ಹಾಡು ‘ಸೈಯನ್ ಸೈಯನ್’ ಎನ್ನುವ ಹಾಡಿನಲ್ಲಿಯೂ ಕಾಣಿಸಿಕೊಂಡಿದ್ದಾರೆ.

ನವದೆಹಲಿ (ಆ.09): ಯೋಗಗುರು ಬಾಬಾ ರಾಮ್ ದೇವ್ ಯೇ ಹೇ ಇಂಡಿಯಾ ಎನ್ನುವ ಬಾಲಿವುಡ್ ಚಿತ್ರದ ಪ್ರಮೋಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅಂದ ಹಾಗೆ ಅದೇ ಚಿತ್ರದ ಒಂದು ಹಾಡು ‘ಸೈಯನ್ ಸೈಯನ್’ ಎನ್ನುವ ಹಾಡಿನಲ್ಲಿಯೂ ಕಾಣಿಸಿಕೊಂಡಿದ್ದಾರೆ.

ಗೇವಿ ಚಹಲ್ ಮತ್ತು ಡೀನಾ ಉಪ್ಪಾಲ್ ಅಭಿನಯದ ಯೇ ಹೇ ಇಂಡಿಯಾ ಚಿತ್ರವನ್ನು ಲೋಮ್ ಹರ್ಷ್ ನಿರ್ದೇಶಿಸಿದ್ದು, ಸಂದೀಪ್ ಚೌಧರಿ ನಿರ್ಮಾಣ ಮಾಡಿದ್ದಾರೆ. ಇದೇ ಆ.18 ರಂದು ಚಿತ್ರ ತೆರೆ ಕಾಣಲಿದೆ.

ಯೇ ಹೇ ಇಂಡಿಯಾ ಚಿತ್ರದ ಬಗ್ಗೆ ಬಾಬಾ ರಾಮ್ ದೇವ್ ಮಾತನಾಡುತ್ತಾ, ಇಡೀ ಜಗತ್ತನ್ನೇ ಮುನ್ನಡೆಸುವ ಶಕ್ತಿ ಭಾರತಕ್ಕಿದೆ. ಈ ಬದಲಾವಣೆಯನ್ನು ಯೇ ಹೇ ಇಂಡಿಯಾದಲ್ಲಿ ತೋರಿಸಲಾಗಿದೆ. ಬಹಳಷ್ಟು ಯೋಚನೆ ಮಾಡಿಯೇ ನಾನು ಈ ಚಿತ್ರಕ್ಕೆ ಬೆಂಬಲಿಸುತ್ತಿದ್ದೇನೆ. ಅದೇ ರೀತಿ ಪ್ರತಿಯೊಬ್ಬರೂ ಬೆಂಬಲಿಸಬೇಕೆಂದು ನಿರೀಕ್ಷಿಸುತ್ತೇನೆ ಎಂದು ಹೇಳಿದರು.

ನಮ್ಮ ಚಿತ್ರಕ್ಕೆ ಬೆಂಬಲ ನೀಡಿದ ಬಾಬಾ ರಾಮ್’ದೇವ್ ಗೆ ನಾವು ಧನ್ಯವಾದಗಳನ್ನು ಹೇಳಲಿಚ್ಚಿಸುತ್ತೇವೆ ಎಂದು ಚಿತ್ರ ನಿರ್ದೇಶಕ ಲೋಮ್ ಹರ್ಷ್ ಹೇಳಿದ್ದಾರೆ.