ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಯೋಗ ಗುರು ಬಾಬಾ ರಾಮ್ ದೇವ್ ತಿಹಾರ್ ಜೈಲಿನಲ್ಲಿ ಯೋಗ ತರಬೇತಿ ನೀಡಿದರು. ಸುಮಾರು 11 ಸಾವಿರಕ್ಕೂ ಅಧಿಕ ಖೈದಿಗಳು ಯೋಗ ತರಬೇತಿಯಲ್ಲಿ ಪಾಲ್ಗೊಂಡಿದ್ದರು. ತಿಹಾರ್ ಜೈಲಿಗೆ ಒಂದು ಬ್ರ್ಯಾಂಡ್ ಕಟ್ಟಿಕೊಡುತ್ತೇನೆ ಎಂದು ಹೇಳಿದರು. ಹಾಗಾದರೆ ರಾಮ್ ದೇವ್ ಯಾವ ಆಧಾರದಲ್ಲಿ ಜೈಲಿಗೆ ಬ್ರಾಂಡ್ ಮೌಲ್ಯ ತರ್ತಾರೆ ಇಲ್ಲಿದೆ ವಿವರ..
ನವದೆಹಲಿ [ಜೂನ್ 18] ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಯೋಗ ಗುರು ಬಾಬಾ ರಾಮ್ ದೇವ್ ತಿಹಾರ್ ಜೈಲಿನಲ್ಲಿ ಯೋಗ ತರಬೇತಿ ನೀಡಿದರು. ಸುಮಾರು 11 ಸಾವಿರಕ್ಕೂ ಅಧಿಕ ಖೈದಿಗಳು ಯೋಗ ತರಬೇತಿಯಲ್ಲಿ ಪಾಲ್ಗೊಂಡಿದ್ದರು.
ಯೋಗ ತರಬೇತಿ ನೀಡಿರುವುದು ಮಾತ್ರವಲ್ಲದೇ ರಾಮ್ ದೇವ್ ಖೈದಿಗಳಿಗೆ ಉದ್ಯೋಗ ಕಲ್ಪಿಸಿಕೊಡುವ ಭರವಸೆಯನ್ನು ನೀಡಿದರು. ಯೋಗ ಗುರು ರಾಮ್ ದೇವ್ ಜೈಲಿನೊಳಗೆ ನಾಲ್ಕು ಗಂಟೆಗೂ ಅಧಿಕ ಕಾಲ ಕಳೆದರು. ಖೈದಿಗಳು ತಯಾರು ಮಾಡುತ್ತಿರುವ ಉತ್ಪನ್ನ ಗಳನ್ನು ವೀಕ್ಷಿಸಿದರು.
ಟೆಲಿಕಾಂ ಕ್ಷೇತ್ರಕ್ಕೆ ಪತಂಜಲಿ?: ಸಮೃದ್ಧಿ ಸಿಮ್ ಮರ್ಮವೇನು?
9 ಜೈಲಿನ ಕೈದಿಗಳು ರಾಮ್ ದೇವ್ ಯೋಗ ತರಬೇತಿಯಲ್ಲಿ ಭಾಗವಹಿಸಿದ್ದರು. ದ್ವೇಷ ಮತತು ಸಿಟ್ಟನ್ನು ಬಿಟ್ಟು ನಕಾರಾಥ್ಮಕ ವಿಚಾರಗಳನ್ನು ತಲೆಯಿಂದ ಹೊರಹಾಕಬೇಕು. ಕೆಟ್ಟ ಚಟಗಳನ್ನು ದುರವಿಡಬೇಕು ಎಂಬ ಸಲಹೆಯನ್ನು ನೀಡಿದರು.
ಜೈಲಿನಿಂದ ಬಿಡುಗಡೆಯಾಗುವ ಸಾವಿರಕ್ಕೂ ಅಧಿಕ ಕೈದಿಗಳಿಗೆ ಉದ್ಯೋಗ ನೀಡುವ ಭರವಸೆಯನ್ನು ನೀಡಿದರು. ಅಲ್ಲದೇ ತಿಹಾರ್ ಜೈಲಿನಲ್ಲಿ ಸಿದ್ಧವಾಗುತ್ತಿರುವ ಉತ್ಪನ್ನಗಳಿಗೆ ಬ್ರ್ಯಾಂಡ್ ಮೌಲ್ಯ ತಂದುಕೊಡುತ್ತೇನೆ ಎಂದು ಹೇಳಿದ್ದಾರೆ.
