ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ ಇದೀಗ ಟೆಲಿಕಾಂ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದೆ. ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಜೊತೆ ಒಪ್ಪಂದ ಮಾಡಿಕೊಂಡಿರುವ ಪತಂಜಲಿ, ತನ್ನ ಕಂಪನಿ ನೌಕರರಿಗೆ ಸಮೃದ್ಧಿ ಸಿಮ್ ಪರಿಚಯಿಸಿದೆ.

ನವದೆಹಲಿ[ಮೇ 29]: ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ ಇದೀಗ ಟೆಲಿಕಾಂ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದೆ. ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಜೊತೆ ಒಪ್ಪಂದ ಮಾಡಿಕೊಂಡಿರುವ ಪತಂಜಲಿ, ತನ್ನ ಕಂಪನಿ ನೌಕರರಿಗೆ ಸಮೃದ್ಧಿ ಸಿಮ್ ಪರಿಚಯಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಈ ಸಮೃದ್ಧಿ ಸಿಮ್ ಕೇವಲ ಪತಂಜಲಿ ಕಂಪನಿಯ ನೌಕರರಿಗೆ ಮಾತ್ರ ಲಭ್ಯವಿದ್ದು, ಸ್ವದೇಶಿ ಸಮೃದ್ಧಿ ಸಿಮ್‌ ಕಾರ್ಡ್‌ ಹೊಂದಿರುವರಿಗೆ ಪತಂಜಲಿ ಉತ್ಪನ್ನಗಳಲ್ಲಿ ಶೇ.10 ರಿಯಾಯಿತಿ ಸಿಗಲಿದೆ. ಸಾರ್ವಜನಿಕರಿಗೂ ಸಮೃದ್ಧಿ ಸಿಮ್ ಸಿಗಲಿದೆ ಎಂದು ಈ ಮೊದಲು ಹೇಳಲಾಗಿತ್ತಾದರೂ, ಇದೀಗ ಕೇವಲ ಕಂಪನಿ ನೌಕರರಿಗೆ ಮಾತ್ರ ಸೀಮಿತ ಎಂದು ಸ್ಪಷ್ಟಪಡಿಸಲಾಗಿದೆ.

ರೂ. 144ಗೆ 2ಜಿಬಿ ಡೇಟಾ 100 ಎಸ್‌ಎಂಎಸ್‌ಗಳು ಮತ್ತು ರಾಷ್ಟ್ರದಾದ್ಯಂತ ಅನಿಯಮಿತ ಕರೆಗಳನ್ನು ಮಾಡುವ ಆಫರ್‍ ನೀಡಲಾಗಿದೆ .ಇದಲ್ಲದೆ ಸಿಮ್‌ ಕಾರ್ಡ್‌ ಜತೆ ಅಫಘಾತ ವಿಮೆ, ₹2.5 ಲಕ್ಷ . ವರೆಗೆ ವೈದ್ಯಕೀಯ ಆರೋಗ್ಯ ವಿಮೆ ಹಾಗೂ 5 ಲಕ್ಷ ರೂ. ವರೆಗೆ ಜೀವ ವಿಮೆಯನ್ನು ಅಳವಡಿಸಲಾಗಿದೆ.