ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯೆಂದು ಸಾಬೀತಾಗಿರುವ ಸ್ವಘೋಷಿತ ದೇವಮಾನವ ಬಾಬಾ ರಾಮ್ ರಹೀಂ ಸಿಂಗ್'ಗೆ ವಿವಿಐಪಿ ಉಪಚಾರ ಸಿಕ್ಕಿರುವುದು ತೀವ್ರ ಟೀಕೆಗೊಳಾಗುತ್ತಿರುವ ಬೆನ್ನಲ್ಲೆ ಸೋಶಿಯಲ್ ಮೀಡಿಯಾದಲ್ಲಿ ಅತ್ಯಾಚಾರಿ ಬಾಬಾ ಬಳಸಿರುವ ಹೆಲಿಕಾಪ್ಟರ್ ಈಗ ಚರ್ಚೆಯನ್ನು ಹುಟ್ಟು ಹಾಕಿದೆ

ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯೆಂದು ಸಾಬೀತಾಗಿರುವ ಸ್ವಘೋಷಿತ ದೇವಮಾನವ ಬಾಬಾ ರಾಮ್ ರಹೀಂ ಸಿಂಗ್'ಗೆ ವಿವಿಐಪಿ ಉಪಚಾರ ಸಿಕ್ಕಿರುವುದು ತೀವ್ರ ಟೀಕೆಗೊಳಾಗುತ್ತಿರುವ ಬೆನ್ನಲ್ಲೆ ಸೋಶಿಯಲ್ ಮೀಡಿಯಾದಲ್ಲಿ ಅತ್ಯಾಚಾರಿ ಬಾಬಾ ಬಳಸಿರುವ ಹೆಲಿಕಾಪ್ಟರ್ ಈಗ ಚರ್ಚೆಯನ್ನು ಹುಟ್ಟು ಹಾಕಿದೆ.

ರಾಮ್ ರಹೀಮ್'ನನ್ನು ರೊಹ್ಟಕ್ ಜೈಲಿಗೆ ಕೊಂಡೊಯ್ಯಲು ಬಳಸಲಾದ ಹೆಲಿಕಾಪ್ಟರ್'ನ್ನು ಪ್ರಧಾನಿ ಮೋದಿಯೂ ಕೂಡಾ ಈ ಹಿಂದೆ ಬಳಸುತ್ತಿದ್ದರು ಎನ್ನಲಾಗಿದೆ. ಗೌತಮ್ ಅಡಾನಿಗೆ ಒಡೆತನದ AW-139 ಹೆಲಿಕಾಪ್ಟರ್'ನ್ನು ಮೋದಿ ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಳಸಿದ್ದಾರೆ. ಅವರು ಅದರಿಂದ ಇಳಿಯುತ್ತಿರುವ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.