ಬಾಬಾ'ನಿಗೆ ಪೊಲೀಸರ ಜೊತೆಗೆ ಜೈಲಿನ ಸುತ್ತಲೂ 23 ಅರೆ ಸೇನಾ ಮಿಲಿಟರಿ ಕಂಪನಿಗಳು ಕಾವಲು ಕಾಯಲಿವೆ.

ಚಂಡೀಘಡ(ಆ.28): ಅತ್ಯಾಚಾರ ಆರೋಪದ ಮೇಲೆ 20 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಡೇರಾ ಸಚ್ಚಾ ಸೌದ ಸಂಘಟನೆಯ ಮುಖ್ಯಸ್ಥ ರಾಂ ರಹೀಂ ಸಿಂಗ್' ಈಗ ಕೈದಿ ನಂ 1997. ಅತ್ಯಂತ ಹೆಚ್ಚು ಭದ್ರತೆಯುಳ್ಳ ರೋಹ್ಟಕ್ ಜೈಲಿನಲ್ಲಿ ಶಿಕ್ಷೆ ಅನುಭವಿಸಬೇಕಾಗಿರುವ ಬಾಬಾ'ನಿಗೆ ಪೊಲೀಸರ ಜೊತೆಗೆ ಜೈಲಿನ ಸುತ್ತಲೂ 23 ಅರೆ ಸೇನಾ ಮಿಲಿಟರಿ ಕಂಪನಿಗಳು ಕಾವಲು ಕಾಯಲಿವೆ.

ಕಳೆದ ಶುಕ್ರವಾರದಂದು ಸಿಬಿಐ ಕೋರ್ಟ್ ನ್ಯಾಯಾಧೀಶರು ಡೇರಾ ಸಚ್ಚಾ ಸೌಧಾ ಸಂಸ್ಥೆಯ ಸ್ವಘೋಷಿತ ದೇವಮಾನವನ್ನು ಅತ್ಯಾಚಾರ ಅಪರಾಧಿ ಎಂದು ತೀರ್ಪು ನೀಡಿತ್ತು. 15 ವರ್ಷಗಳ ಹಿಂದಿನ ಪ್ರಕರಣದಲ್ಲಿ ಬಾಬಾ ಶಿಕ್ಷೆ ಅನುಭವಿಸಬೇಕಿದೆ.