ನವದೆಹಲಿ (ನ.17): ಕಪ್ಪುಹಣವನ್ನು ಹೊರಗೆ ತರಲು ಕೇಂದ್ರ ಸರ್ಕಾರ ಮಾಡಿದ ಹಳೆಯ ನೋಟುಗಳ ನಿಷೇಧವನ್ನು, ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್, ಉರಿ ಭಯೋತ್ಪಾದಕರ ದಾಳಿಗೆ ಹೋಲಿಸಿದ್ದಾರೆ.

ವಿವಾದಾತ್ಮಕ ಹೇಳಿಕೆ ಮೂಲಕ ರಾಜ್ಯಸಭೆಯಲ್ಲಿ ವಿವಾದ ಸೃಷ್ಟಿಸಿದ್ದಾರೆ. ನೋಟು ಬದಲಾವಣೆ ವೇಳೆ, ಉರಿ ದಾಳಿಯಲ್ಲಿ ಸತ್ತರಿಗಿಂತ  ಹೆಚ್ಚು ಜನ ಸತ್ತಿದ್ದಾರೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದ  ತಪ್ಪು ನೀತಿಯಿಂದ 40ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಅಜಾದ್ ಹೇಳಿದ್ದಾರೆ.

ಅಜಾದ್ ಹೇಳಿಕೆಯನ್ನು ಬಿಜೆಪಿ ಸಂಸದರು ಒಗ್ಗಟ್ಟಾಗಿ ಖಂಡಿಸಿದ್ಧಾರೆ. ಅಜಾದ್ ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ. ನೀವು ಉಗ್ರರನ್ನು ನುಗ್ಗಿಸಿದ್ದ ಪಾಕಿಸ್ತಾನಕ್ಕೆ ಸರ್ಟಿಫಿಕೇಟ್ ಕೊಡುತ್ತಿದ್ದೀರಾ.? ಇದು ರಾಷ್ಟ್ರವಿರೋಧಿ ಹೇಳಿಕೆ ಎಂದು ವೆಂಕಯ್ಯ ನಾಯ್ಡು ಟೀಕಿಸಿದ್ದಾರೆ.