ನವದೆಹಲಿ[ಆ.31]: ಮಹತ್ವದ ಬೆಳವಣಿಗೆಯೊಂದರಲ್ಲಿ, ಅಯೋಧ್ಯೆಯಲ್ಲಿನ ವಿವಾದಿತ ಬಾಬ್ರಿ ಮಸೀದಿ- ರಾಮಮಂದಿರ ಜಾಗದಲ್ಲಿ ತಮ್ಮ ಪಾಲಿಗೆ ಬಂದಿರುವ ಜಾಗವನ್ನು ಹಿಂದೂ ಸಂಘಟನೆಗಳಿಗೆ ಬಿಟ್ಟುಕೊಡಲು ಸಿದ್ಧ ಎಂದು ಉತ್ತರಪ್ರದೇಶದ ಶಿಯಾ ವಕ್ಫ್ ಮಂಡಳಿಯ ಘೋಷಿಸಿದೆ.

ವಿವಾದ ಕುರಿತು ನಡೆಯುತ್ತಿರುವ ನಿತ್ಯ ವಿಚಾರಣೆ ವೇಳೆ ಶುಕ್ರವಾರ ವಾದ ಮಂಡಿಸಿದ ಶಿಯಾ ವಕ್ಫ್ ಮಂಡಳಿಯ ಪರ ವಕೀಲ ಎಂ.ಸಿ ಧಿಂಗ್ರಾ, ಹಿಂದೂ ಮಹಾಸಭಾ ಮಾಡಿದ ಅಭಿಪ್ರಾಯಗಳಿಗೆ ತನ್ನ ಆಕ್ಷೇಪ ಇಲ್ಲ ಎಂದು ಹೇಳಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಲು ಮೊಘಲ್ ವಂಶಸ್ಥನಿಂದ ಚಿನ್ನದ ಇಟ್ಟಿಗೆ!

ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿಯನ್ನು ಮೊಘಲರ ರಾಜ ಬಾಬರ್‌ ಸೇನೆಯ ಕಮಾಂಡರ್‌ ಆಗಿದ್ದ ಮೀರ್‌ ಬಾಕಿ ನಿರ್ಮಿಸಿದ್ದ. ಆತನೇ ಮಸೀದಿಯ ಮೊದಲ ಉಸ್ತುವಾರಿಯಾಗಿದ್ದ. ಜೊತೆಗೆ ಅಲಹಾಬಾದ್‌ ಹೈಕೋರ್ಟ್‌ ಅಯೋಧ್ಯೆಯಲ್ಲಿನ ವಿವಾದಿತ 2.77 ಎಕರೆ ಜಾಗವನ್ನು ಮೂರು ಭಾಗವಾಗಿ ವಿಂಗಡಿಸಿ ಅದರಲ್ಲಿ ಒಂದು ಭಾಗವನ್ನು ಮುಸ್ಲಿಮರಿಗೆ ನೀಡಿದೆಯೇ ಹೊರತೂ ಸುನ್ನಿ ವಕ್ಫ್ ಮಂಡಳಿಗಲ್ಲ. ಹೀಗಾಗಿ ಶಿಯಾ ವಕ್ಫ್ ಮಂಡಳಿಗೆ ಸೇರಿದ ಜಾಗವನ್ನು ಹಿಂದೂಗಳಿಗೆ ನೀಡಲು ಸಿದ್ಧ ಎಂದು ಮಾಹಿತಿ ನೀಡಿದರು.