ರಾಜು ಕನ್ನಡ ಮಿಡಿಯಂ ಚಿತ್ರದ ಅವಂತಿಕಾ ಮತ್ತು ನಿರ್ಮಾಪಕ ಸುರೇಶ್ ಮಧ್ಯೆದ ವಿವಾದಕ್ಕೆ ತೆರೆ ಬಿದ್ದಿದೆ.
ಬೆಂಗಳೂರು (ಜೂ.15): ರಾಜು ಕನ್ನಡ ಮಿಡಿಯಂ ಚಿತ್ರದ ಅವಂತಿಕಾ ಮತ್ತು ನಿರ್ಮಾಪಕ ಸುರೇಶ್ ಮಧ್ಯೆದ ವಿವಾದಕ್ಕೆ ತೆರೆ ಬಿದ್ದಿದೆ.
ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇಂದು ನಡೆದ ಸುದೀರ್ಘ ಇತ್ಯರ್ಥ ಸಭೆಯಲ್ಲಿ ಎಲ್ಲ ಆರೋಪಗಳು ಚರ್ಚೆ ಆಗಿವೆ. ಇದ್ದ ಸಮಸ್ಯೆಗೂ ಪರಿಹಾರ ಸಿಕ್ಕಿದೆ. ಚಿತ್ರದಿಂದ ಹೊರಗೆ ಕಳುಹಿಸಲ್ಪಟ್ಟ ಅವಂತಿಕಾ ಚಿತ್ರದಲ್ಲಿ ಮುಂದುವರೆಯುತ್ತಿದ್ದಾರೆ. ಕೋರ್ಟ್ನಲ್ಲಿ ಹಾಕಿದ್ದ ಕೇಸನ್ನೂ ಅವಂತಿಕಾ ಹಿಂಪಡೆಯುತ್ತಿದ್ದಾರೆ. ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ ಮಾಡೋದಾಗಿ ಕೇಳಿಕೊಂಡಿದ್ದರು. ಪಾತ್ರಕ್ಕೆ ವಾಯ್ಸ್ ಸರಿ ಹೊಂದಿದರೆ ಚಿತ್ರದ ನಿರ್ದೇಶಕರು ಅವಂತಿಕಾ ವಾಯ್ಸ್’ನ್ನೆ ಇಡಲಿದ್ದಾರೆ. ಹಲವು ಪ್ರಶ್ನೆಗಳಿಂದಲೇ ವಿವಾದಕ್ಕೀಡಾದ ಅವಂತಿಕಾ-ಸುರೇಶ್ ವಿವಾದಕ್ಕೆ ಸ್ವತ ಅವಂತಿಕಾ ಚೇಂಬರ್’ಗೆ ಬಂದು ಎಲ್ಲವನ್ನೂ ಸ್ಪಷ್ಟಪಡಿಸಿದ್ದಾರೆ. ತಾವು ಎಲ್ಲೂ ಲೈಂಗಿಕ ಕಿರುಕುಳ ಆಗಿದೆ ಅಂತಲೂ ಹೇಳಿಲ್ಲ. ಸುರೇಶ್ ಅವರ ಹೆಸರನ್ನೂ ತೆಗೆದುಕೊಂಡಿಲ್ಲ ಅಂತಲೇ ಮತ್ತೆ ಮತ್ತೆ ಹೇಳಿದ್ದಾರೆ. ಚೇಂಬರ್ ನ ಅಧ್ಯಕ್ಷರಾದ ಸಾ.ರಾ.ಗೋವಿಂದು ನೇತೃತ್ವದಲ್ಲಿ ಈ ವಿವಾದಕ್ಕೆ ಅಂತ್ಯ ಹಾಡಲಾಗಿದೆ.
