ರಂಗಿ ತರಂಗ’ ಖ್ಯಾತಿಯ ನಟಿ ಅವಂತಿಕಾ ಶೆಟ್ಟಿಗೆ ಲೈಗಿಂಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ‘ರಾಜು ಕನ್ನಡ ಮೀಡಿಯಂ’ ನಿರ್ಮಾಪಕ ಸುರೇಶ್ ಲೈಗಿಂಕ ಕಿರುಕುಳ ನೀಡಿದ್ದಾರೆ ಎಂದು ನಟಿ ಅವಂತಿಕಾ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಟ್ವಿಟರ್'ನಲ್ಲಿ ಸೆಟ್'ನಲ್ಲಿ ನೀಡುತ್ತಿದ್ದ ಕಿರುಕುಳದ ಬಗ್ಗೆ ಬರೆದುಕೊಂಡಿರುವ ಅವಂತಿಕಾ ಶೆಟ್ಟಿ ಟಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ
ಬೆಂಗಳೂರು(ಜೂ.04): ರಂಗಿ ತರಂಗ’ ಖ್ಯಾತಿಯ ನಟಿ ಅವಂತಿಕಾ ಶೆಟ್ಟಿಗೆ ಲೈಗಿಂಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ‘ರಾಜು ಕನ್ನಡ ಮೀಡಿಯಂ’ ನಿರ್ಮಾಪಕ ಸುರೇಶ್ ಲೈಗಿಂಕ ಕಿರುಕುಳ ನೀಡಿದ್ದಾರೆ ಎಂದು ನಟಿ ಅವಂತಿಕಾ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ಟ್ವಿಟರ್'ನಲ್ಲಿ ಸೆಟ್'ನಲ್ಲಿ ನೀಡುತ್ತಿದ್ದ ಕಿರುಕುಳದ ಬಗ್ಗೆ ಬರೆದುಕೊಂಡಿರುವ ಅವಂತಿಕಾ ಶೆಟ್ಟಿ ಟಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ
ಅವಂತಿಕಾ ಅಳಲು
ತುಂಬಾ ಡಿಸ್ಟರ್ಬ್ ಆಗಿದ್ದೇನೆ. ಚಿತ್ರೀಕರಣ ವೇಳೆ ಸೆಟ್'ನಲ್ಲಿ ಆದ ಘಟನೆಗಳು ತುಂಬಾ ಘಾಸಿಗೊಳಿಸಿವೆ. ಅವೆಲ್ಲವನ್ನು ನಾನು ಮೆರೆತು ಬಿಟ್ಟಿದ್ದೆ. ಸಣ್ಣ ಪುಟ್ಟ ವಿಷಯಗಳನ್ನು ದೊಡ್ಡದಾಗಿ ಮಾಡುವುದು ಸರಿಯಲ್ಲ ಎಂದೇ ನಾನು ಭಾವಿಸಿದ್ದೆ. ಆದರೆ ಈಗ ಅವರೇ ಎಲ್ಲವನ್ನು ಕೆದಕುತ್ತಿದ್ದಾರೆ. ನನ್ನನ್ನೇ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ನಾನೇ ಆರೋಪಿ ಎನ್ನುವ ಹಾಗೆ ಮಾತನಾಡುತ್ತಿದ್ದಾರೆ. ಅವರ ದೃಷ್ಟಿಯಲ್ಲಿ ನಾನೇ ಆರೋಪಿ. ಇಷ್ಟೆಲ್ಲ ಆದ್ಮೇಲೆ ನಾನು ಸುಮ್ಮನಿರುವುದು ಸರಿಯಲ್ಲ. ಈಗ ಎಲ್ಲವನ್ನು ಹೇಳಿಕೊಳ್ಳಬೇಕಿದೆ. ವಾಸ್ತವ ಮುಚ್ಚಿಟ್ಟು ನಾನು ಆರೋಪಿ ಆಗಲು ಸಿದ್ಧಳಿಲ್ಲ.
2016ರ ಜುಲೈ ತಿಂಗಳಲ್ಲಿ ನಾನು ರಾಜು ಕನ್ನಡ ಮೀಡಿಯಂ ಚಿತ್ರಕ್ಕೆ ಕಾಲ್ ಶೀಟ್ ನೀಡಿದ್ದು. ನಾನಾಗ ಅನೂಪ್ ಭಂಡಾರಿ ನಿರ್ದೇಶನದ ರಾಜರಥ ಚಿತ್ರಕ್ಕೆ ಫಿಕ್ಸ್ ಆಗಿದ್ದೆ. ಆ ಟೈಮ್ನಲ್ಲಿಯೇ ನಿರ್ಮಾಪಕ ಸುರೇಶ್ ನನ್ನನ್ನು ಭೇಟಿ ಮಾಡಿ, ಚಿತ್ರಕ್ಕೆ ತಾವೇ ಬೇಕು ಅಂತ ಕೇಳಿಕೊಂಡಿದ್ದರು. ನಮ್ಮ ಭೇಟಿ ಆಗಿದ್ದು ಮುಂಬೈನಲ್ಲಿ. ಆ ದಿನ ಅವರೊಂದಿಗೆ ಮಾತನಾಡುತ್ತಾ, ನಾನು ಆದಾಗಲೇ ಒಪ್ಪಿಕೊಂಡ ಪ್ರಾಜೆಕ್ಸ್ ಜತೆಗೆ ಕೆಲವು ಕಂಡಿಷನ್ಗಳನ್ನು ಹೇಳಿದ್ದೆ. ಅದಕ್ಕೆಲ್ಲ ಅವರು ಓಕೆ ಅಂದಿದ್ದರು. ಕಾಂಟ್ರಾಕ್ಟ್'ಗೆ ಸಹಿ ಮಾಡುವಾಗ ನಾನು ಎಲ್ಲವನ್ನು ಕ್ಲಿಯರ್ ಆಗಿ ತಿಳಿಸಿದ್ದೆ. ಈಗಾಗಲೇ ನಾನು ಅನೂಪ್ ಚಿತ್ರಕ್ಕೆ ಡೇಟ್ಸ್ ಕೊಟ್ಟಿದ್ದೇನೆ. ಆ ಡೇಟ್ಸ್ಗಳಿಗೆ ಯಾವುದೇ ರೀತಿ ಕ್ಲ್ಯಾಶ್ ಆಗದಂತೆ ನಿಮ್ಮ ಚಿತ್ರದ ಚಿತ್ರೀಕರಣಕ್ಕೆ ಡೇಟ್ಸ್ ಕೊಡಬೇಕು. ಜತೆಗೆ, ಮುಂಬೈನಿಂದ ನಾನು ಬರುವಾಗ ನನ್ನೊಂದಿಗೆ ಮ್ಯಾನೇಜರ್ ಕೂಡ ಬರುತ್ತಾರೆ. ಅವರ ಖರ್ಚು ವೆಚ್ಚ ನೋಡಿಕೊಳ್ಳಬೇಕು. ಇಷ್ಟಕ್ಕೆ ನಿಮಗೆ ಒಪ್ಪಿಗೆ ಇದ್ದರೆ, ಮಾತ್ರ ನಾನು ಅಭಿನಯಿಸಲು ರೆಡಿ ಅಂಥ ಮುಂಚಿತವಾಗಿಯೇ ಹೇಳಿದ್ದೆ. ಅದಕ್ಕವರು ಒಪ್ಪಿಕೊಂಡರು.
ಮಾತುಕತೆ ಅಲ್ಲಿಗೆ ಫೈನಲ್ ಆಗಿತ್ತು. ಅಗ್ರಿಮೆಂಟ್ ಪ್ರಕಾರ ಆಗಸ್ಟ್'ನಿಂದಲೇ ಶೂಟ್ ಶುರುವಾಯಿತು. ದುರಾದೃಷ್ಟ ಅಂದ್ರೆ ಚಿತ್ರೀಕರಣದ ಮೊದಲ ದಿನವೇ ಸೆಟ್ನಲ್ಲಿ ಕಿರುಕುಳ ಆರಂಭ ಆಯಿತು. ಅದು ಕಾಸ್ಟ್ಯೂಮ್ ಸಮಸ್ಯೆ. ತುಂಬಾನೆ ಕಡಿಮೆ ಎನಿಸುವ ಬಟ್ಟೆ ಕೊಟ್ಟರು. ಆ ಬಗ್ಗೆ ನನಗೆ ಅವರು ಮುಂಚಿತವಾಗಿ ಏನನ್ನು ಹೇಳಿರಲಿಲ್ಲ. ಆದ್ರೂ ಪಾತ್ರಕ್ಕೆ ಅಗತ್ಯ ಎನ್ನುವ ಕಾರಣಕ್ಕೆ ಸ್ಕರ್ಟ್ ಹಾಕಿದ್ದೆ. ನನ್ನನ್ನು ನೋಡಿದ ಲೈಟ್ ಬಾಯ್, ವ್ಯಂಗ್ಯವಾಗಿ ಮಾತನಾಡಿದ. ಮತ್ತೊಬ್ಬ ಹಿಂದೆ ಬಂದು ಕಾಸ್ಟ್ಯೂಮ್ ಸರಿಪಡಿಸುವ ನೆಪದಲ್ಲಿ ನನ್ನನ್ನು ಟಚ್ ಮಾಡಿದ. ಭಯ ಶುರುವಾಯಿತು. ನಿರ್ದೇಶಕ ನರೇಶ್ ಅವರಿಗೆ ಹೇಳಿದೆ. ಅವರು ಶಾಟ್ ಮುಗಿಯಲಿ, ಆಮೇಲೆ ನೋಡೋಣ ಅಂತ ಹೇಳಿದ್ರು. ಆ ದಿನದ ಚಿತ್ರೀಕರಣ ಹ್ಯಾಗೋ ಮುಗಿಸಿಕೊಂಡು ಬಂದೆ. ಆದ್ರೆ ನನಗೆ ಸೇಫ್ಟಿ ಫಿಲಿಂಗ್ ಕಾಡತೊಡಗಿತು.
ಆದಾದ ನಂತರ ಡೇ & ನೈಟ್ ಶೂಟ್ ನಡೆಯಿತು. ನಾನು ರಾಜ ರಥ ಚಿತ್ರಕ್ಕೆ ಬ್ಲಾಕ್ ಮಾಡಿದ್ದ ಡೇಟ್ಸ್ನಲ್ಲಿ ಚಿತ್ರೀಕರಣ ನಡೆಯಿತು. ನಾನಾಗ ಅನೂಪ್ ಅವರಲ್ಲಿ ಸಾರಿ ಕೇಳಿ, ಹೇಗೋ ಮ್ಯಾನೇಜ್ ಮಾಡಿದೆ. ಮತ್ತು ಅದೇ ಪರಿಸ್ಥಿತಿ ಮುಂದುವರೆಯಿತು. ಅಕ್ಟೋಬರ್ ತಿಂಗಳಲ್ಲಿ ನಾನು ರಾಜ ರಥ ಚಿತ್ರದ ಚಿತ್ರೀಕರಣಕ್ಕೆ ಡೇಟ್ಸ್ ಕೊಟ್ಟಿದ್ದೆ. ಆ ಟೈಮ್ನಲ್ಲಿ ಡೇಟ್ಸ್ ಬ್ಲಾಕ್ ಮಾಡುವಂತೆ ಒತ್ತಡ ತಂದರು. ಡೈರೆಕ್ಟರ್ ಅನೂಪ್ ಅವರಿಗೆ ನನ್ನ ಪರಿಸ್ಥಿತಿ ಹೇಳಿದೆ. ಅವರು ಒಲ್ಲದ ಮನಸ್ಸಲ್ಲಿ ಓಕೆ ಅಂದ್ರು. ಇನ್ನೇನು ಬ್ಲಾಕ್ ಆದ ದಿನಗಳಲ್ಲಿ ಶೂಟ್ ಆಗಬಹುದು ಎನ್ನುವುದು ನನ್ನ ಲೆಕ್ಕಚಾರ ಆಗಿತ್ತು. ಆ ಟೈಮ್ನಲ್ಲಿ ಅವರು ಸಿಂಗಲ್ ಡೇ ಶೂಟ್ ಮಾಡಲಿಲ್ಲ. ನಾನು ಸುಮ್ಮನೆ ಕಾಲಹರಣ ಮಾಡಬೇಕಾಗಿ ಬಂತು.
ಎಂಟು ತಿಂಗಳಿನಿಂದ ನಾನು ಯಾವುದೇ ಪ್ರಾಜೆಕ್ಟ್ ಒಪ್ಪಿಕೊಳ್ಳದೇ ಕುಳಿತರೂ ಕಲೆ ಕೆಡಿಸಿಕೊಳ್ಳಲಿಲ್ಲ. ಈ ನಡುವೆ ಡಿಮಾನಿಟೈಶನ್ ಪ್ರಾಬ್ಲಂ ಶುರುವಾಯಿತು. ಸಂದರ್ಭ ನನಗೂ ಅರ್ಥವಾಯಿತು. ಜನವರಿ ತಿಂಗಳಿಗೆ ಮತ್ತೆ ಶೂಟಿಂಗ್ ಸ್ಟಾರ್ಟ್ ಅಂತ ಹೇಳಿದ್ರು. ವಿಚಿತ್ರ ಅಂದ್ರೆ ಶೂಟಿಂಗ್ ಶುರುವಾಗುವ ಹಿಂದಿನ ದಿನ ಕಾಲ್ ಮಾಡಿ, ನಾಳೆ ಶೂಟಿಂಗ್ ಇದೆ, ನೀವೇ ಕಾಸ್ಟ್ಯೂಮ್ ತರಬೇಕು ಅಂತ ಹೇಳ್ತಿದ್ರು. ಅದಕ್ಕೂ ತಲೆಕೆಡಿಸಿಕೊಳ್ಳಲ್ಲಿಲ್ಲ. ಅಲ್ಲಿಂದ ಮುಂಬೈನಿಂದ ಬೆಂಗಳೂರಿಗೆ ನಾನು ಸನ್ನಿವೇಶಕ್ಕೆ ತಕ್ಕಂತೆ ಕಾಸ್ಟ್ಯೂಮ್ ಕ್ಯಾರಿ ಮಾಡುವುದು ಮಾಮೂಲು ಆಯಿತು. 20 ದಿನ ಶೂಟಿಂಗ್ ನಡೆಯಿತು. ಅಷ್ಟು ದಿನ ನಾನು ಸಾಕಷ್ಟು ಕಿರುಕುಳ ಅನುಭವಿಸಿದೆ. ಸೆಟ್ನಲ್ಲಿ ಶಾಟ್ ಮುಗಿಸಿ, ವ್ಯಾನಿಟಿಗೆ ಹೋಗಿ ಕುಳಿತರೆ, ಸುಮ್ಮನೆ ಕಿರುಕುಳ ನೀಡುತ್ತಿದ್ರು.
ಒಂದು ದಿನ ಸಾಂಗ್ ಶೂಟ್ ಅಂತ ಹೇಳಿದ್ರು. ಬೆಳಗ್ಗೆ 8 ಗಂಟೆಗೆ ಸೆಟ್ನಲ್ಲಿ ಇರಬೇಕು ಎನ್ನುವುದು ಅವರ ಕರಾರು. ನಾನು ಬೆಳಗ್ಗೆ ಸರಿಯಾದ ಸಮಯಕ್ಕೆ ಅಲ್ಲಿಗೆ ಹೋದೆ. ಅಚ್ಚರಿ ಅಂದ್ರೆ ಟೀಮ್ನ ಯಾವುದೇ ಮೆಂಬರ್ ಕೂಡ ಅಲ್ಲಿರಲಿಲ್ಲ. ಡೈರೆಕ್ಟರ್ ಕೂಡ ಬಂದಿರಲಿಲ್ಲ. ನಾನೊಬ್ಬಳು ಹುಡುಗಿ ಎನ್ನುವುದೇ ಅವರಿಗೆ ಮರೆತು ಹೋಗಿತ್ತು. ವಾಶ್ ರೂಂ ಕೂಡ ಅಲ್ಲಿ ಇರಲಿಲ್ಲ. ಶೂಟಿಂಗ್ ಅಂದ್ರೆ ಇವೆಲ್ಲ ಇರುತ್ತವೆ. ಅನುಸರಿಕೊಂಡು ಹೋಗೋಣ ಅಂತ ಸುಮ್ಮನಾದೆ. ಆ ದಿನ ಶೂಟ್ ಮುಗಿಸಿ, ಸಂಜೆ ರೂಂಗೆ ಬಂದಾಗ ನಿರ್ಮಾಪಕ ಸುರೇಶ್ ಪರ್ಸನಲ್ ಆಗಿ ಮಾತನಾಡಬೇಕಂತೆ, ಇಲ್ಲಿಗೆ ಬರುತ್ತಾರಂತೆ ಅಂತ ಮ್ಯಾನೇಜರ್ ಹೇಳಿದ್ರು. ನನ್ನ ರೂಂಗೆ ಬೇಡ ಅವರು ಇರುವ ಜಾಗಕ್ಕೆ ಹೋಗೋಣ ಅಂತ ನಾನು ಮತ್ತು ಮ್ಯಾನೇಜರ್ ಹೋದೆವು. ಹೋದಾಗ ಅವರು ಇದು ಪರ್ಸನಲ್ ವಿಚಾರ, ಮ್ಯಾನೇಜರ್ ಕಳುಹಿಸಿ ಅಂದ್ರು. ಅದಕ್ಕೆ ನಾನು ಆಕ್ಷೇಪ ವ್ಯಕ್ತಪಡಿಸಿದೆ. ಅವರು ನನ್ನ ಫ್ಯಾಮಿಲಿ ಮೆಂಬರ್. ಇಲ್ಲಿ ಇರುತ್ತಾರೆ ಹೇಳಿ ಅಂದೆ. ನೀವು ಟೀಮ್ ಜತೆ ಫ್ರೆಂಡ್ಲಿ ಆಗಿಲ್ಲ. ಕ್ಯಾಮೆರಾಮಾನ್ ಸೇರಿದಂತೆ ಎಲ್ಲರ ಜತೆಗೆ ನೀವು ಕೋ ಆಡರ್ಿನೇಟ್ ಮಾಡುತ್ತಿಲ್ಲ. ಬಾಂಬೆ ಹುಡುಗಿ ಅಂತೀರಾ, ಬಾಂಬೆ ಹುಡುಗಿಯರು ಹೇಗೆ ಇರುತ್ತಾರೆ ಅಂತ ನಿಮಗೆ ಗೊತ್ತಿಲ್ಲ ಅಂತ ಸುರೇಶ್ ನನಗೆ ಸಿಟ್ಟಿನಿಂದ ಹೇಳಿದ್ರು. ನಾನು ಇರೋದೆ ಹೀಗೆ. ಆ್ಯಕ್ಟಿಂಗ್ ವಿಚಾರದಲ್ಲಿ ನಿಮಗೆ ಅಸಮಾಧಾನ ಇದ್ದರೆ ಹೇಳಿ, ಬೇರೆ ವಿಚಾರ ಬೇಡ ಎಂದು ಹೇಳಿ ನಾನು ರೂಂಗೆ ಬಂದೆ. ಈ ರೀತಿಯ ಟಾರ್ಚರ್ ನನಗೆ ನಿರಂತರವಾಗಿ ನಡೆಯಿತು.
ಅವಂತಿಕಾ ಶೆಟ್ಟಿ
