ಹೊಟೇಲ್ ಮುಂದೆ ಬೈಕ್ ಪಾರ್ಕಿಂಗ್ ಮಾಡಿದ್ದಕ್ಕೆ ಹೋಟೆಲ್ ಮ್ಯಾನೇಜರ್​ಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಂಗಳೂರಿನ ಯಲಹಂಕದ ನ್ಯೂಟೌನ್​'ನಲ್ಲಿ ನಡೆದಿದೆ. ಹಲ್ಲೆಗೊಳಗಾದ ಮ್ಯಾನೇಜರ್ ಅನ್ನ ಪುರದರ್ ನಾಯ್ಡು ಅಂತ ತಿಳಿದು ಬಂದಿದೆ. ಮೂಲತಃ ಆಂಧ್ರದ ಪುರದರ್ ಯಲಹಂಕ ನ್ಯೂ ಟೌನ್​ನ ಮದರ್ ಡೈರಿ ಸರ್ಕಲ್​ನಲ್ಲಿ ವಂದನಾ ರೆಸ್ಟೋರೆಂಟ್​ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಶುಕ್ರವಾರ ರಾತ್ರಿ ತಮ್ಮ ಹೊಟೇಲ್​ ಬಳಿ ಗಾಡಿ ಪಾರ್ಕ್ ಮಾಡಿ ಒಳ ಹೋಗಿದ್ದಾರೆ. ಈ ವೇಳೆ ಹೊಟೇಲ್ ಒಳಗೆ ನುಗ್ಗಿದ ಆಟೋ ಚಾಲಕರು ನಮ್ಮ ಬ್ಯುಸಿನೆಸ್'​ಗೆ ತೊಂದರೆಯಾಗುತ್ತದೆ ಎಂದು ಜಗಳ ತೆಗೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಬೆಂಗಳೂರು(ಅ.16):ಹೊಟೇಲ್ ಮುಂದೆ ಬೈಕ್ ಪಾರ್ಕಿಂಗ್ ಮಾಡಿದ್ದಕ್ಕೆ ಹೋಟೆಲ್ ಮ್ಯಾನೇಜರ್​ಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬೆಂಗಳೂರಿನ ಯಲಹಂಕದ ನ್ಯೂಟೌನ್​'ನಲ್ಲಿ ನಡೆದಿದೆ. ಹಲ್ಲೆಗೊಳಗಾದ ಮ್ಯಾನೇಜರ್ ಅನ್ನ ಪುರದರ್ ನಾಯ್ಡು ಅಂತ ತಿಳಿದು ಬಂದಿದೆ.

Add Asianetnews Kannada as a Preferred SourcegooglePreferred

ಮೂಲತಃ ಆಂಧ್ರದ ಪುರದರ್ ಯಲಹಂಕ ನ್ಯೂ ಟೌನ್​ನ ಮದರ್ ಡೈರಿ ಸರ್ಕಲ್​ನಲ್ಲಿ ವಂದನಾ ರೆಸ್ಟೋರೆಂಟ್​ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಶುಕ್ರವಾರ ರಾತ್ರಿ ತಮ್ಮ ಹೊಟೇಲ್​ ಬಳಿ ಗಾಡಿ ಪಾರ್ಕ್ ಮಾಡಿ ಒಳ ಹೋಗಿದ್ದಾರೆ. ಈ ವೇಳೆ ಹೊಟೇಲ್ ಒಳಗೆ ನುಗ್ಗಿದ ಆಟೋ ಚಾಲಕರು ನಮ್ಮ ಬ್ಯುಸಿನೆಸ್'​ಗೆ ತೊಂದರೆಯಾಗುತ್ತದೆ ಎಂದು ಜಗಳ ತೆಗೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಪುರದರ್​ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಲ್ಲೆಯಿಂದ ಪುರದರ್ ಕೈ ಮುರಿದು ಹೋಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ ಕಂಪ್ಲೇಟ್ ತಗೋಳಿ ಅಂತ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಗೆ ಹೋದರೆ ದೂರು ಸ್ವೀಕರಿಸದೇ ಸತಾಯಿಸಿದ್ದಾರೆ. ನಂತರ ಹಿರಿಯ ಅಧಿಕಾರಿಯೊಬ್ಬರಿಂದ ಫೋನ್ ಮಾಡಿ ಅವಾಜ್ ಹಾಕಿದಾಗ ದೂರು ತೆಗೆದುಕೊಂಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ನ್ಯೂ ಟೌನ್ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.