ನಗರ ಸಾರಿಗೆ ಚಾಲಕ ಲಕ್ಷ್ಮಣ್  ಮೇಲೆ ಆಟೋ ಚಾಲಕ ರಾಜು ಹಾಗೂ ರವಿ ಮತ್ತು ಅವರ ಸಹಚರರಿಂದ  ಹಲ್ಲೆ ನಡೆದಿದೆ. ಮೂಖ ಪ್ರೇಕ್ಷಕರಂತೆ ಪ್ರಯಾಣಿಕರು ಕುಸ್ತಿಯನ್ನು ನೋಡಿದ್ದಾರೆ.

ಚಿತ್ರದುರ್ಗ(ಡಿ.2): ಸರ್ಕಾರಿ ಬಸ್ ಚಾಲಕನೋರ್ವನ ಮೇಲೆ ಆಟೋ ಚಾಲಕರು ಹಲ್ಲೆ ಮಾಡಿರುವ ಘಟನೆ ಚಿತ್ರದುರ್ಗದ ಐಯುಡಿಪಿ ಬಡಾವಣೆಯಲ್ಲಿ ನಡೆದಿದೆ. ರಸ್ತೆ ಮಧ್ಯದಲ್ಲೇ ಇಬ್ಬರೂ ಕೂಡ ಕುತ್ತಿಗೆ ಹಿಡಿದು ಕುಸ್ತಿಯಾಡಿಕೊಂಡಿದ್ದಾರೆ. ನಗರ ಸಾರಿಗೆ ಚಾಲಕ ಲಕ್ಷ್ಮಣ್ ಮೇಲೆ ಆಟೋ ಚಾಲಕ ರಾಜು ಹಾಗೂ ರವಿ ಮತ್ತು ಅವರ ಸಹಚರರಿಂದ ಹಲ್ಲೆ ನಡೆದಿದೆ. ಮೂಖ ಪ್ರೇಕ್ಷಕರಂತೆ ಪ್ರಯಾಣಿಕರು ಕುಸ್ತಿಯನ್ನು ನೋಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಐಯುಡಿಪಿ ಬಡಾವಣೆಯ 10ನೇ ಕ್ರಾಸ್ ಬಸ್ ನಿಲ್ದಾಣದಲ್ಲಿ ಬಸ್’ನಿಂದ ಪ್ರಯಾಣಿಕರು ಇಳಿಯುತ್ತಿದ್ದ ಹಿನ್ನೆಲೆಯಲ್ಲಿ ರಸ್ತೆ ಬದಿ ಬಸ್ಸನ್ನು ನಿಲ್ಲಿಸಿದ್ದರಿಂದ ಆಕ್ರೋಶಗೊಂಡ ಆಟೋ ಚಾಲಕರು ಬಸ್ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮದ್ಯಪಾನ ಮಾಡಿದ್ದ ಆಟೋ ಚಾಲಕರು ಮನಬಂದಂತೆ ವರ್ತಿಸಿದ್ದಾರೆ.