ಅಂತರ'ರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ನಿವೃತ್ತ ನೇವಿ ಅಧಿಕಾರಿ ಜಾಧವ್ ಅವರಿಗೆ ವಿಧಿಸಿದ್ದ ಗಲ್ಲು ಶಿಕ್ಷೆಗೆ ಸಂಬಂಧಿಸಿದಂತೆ ಗುರುವಾರ ನಡೆದ ವಿಚಾರಣೆಯಲ್ಲಿ ಮುಂದಿನ ಆದೇಶ ಬರುವವವರೆಗೂ ಮರಣದಂಡನೆಯನ್ನು ತಡೆ ಹಿಡಿಯಬೇಕೆಂದು ಕೋರ್ಟ್ ತೀರ್ಪು ನೀಡಿತ್ತು.

ಇಸ್ಲಾಮಾಬಾದ್(ಮೇ.20): ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತರ'ರಾಷ್ಟ್ರೀಯ ನ್ಯಾಯಾಲಯದಲ್ಲಿ ಸೋತ ನಂತರ ಪಾಕಿಸ್ತಾನ ಖಮರ್ಖುರೇಷಿ ಅವರನ್ನು ಬದಲಾಯಿಸಿ ಅಟಾರ್ನಿ ಜನರಲ್ ಅಷ್ಟರ್ ಔಸಾಫ್ ಅವರನ್ನು ನೇಮಕ ಮಾಡಿದೆ.

ಅಂತರ'ರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ನಿವೃತ್ತ ನೇವಿ ಅಧಿಕಾರಿ ಜಾಧವ್ ಅವರಿಗೆ ವಿಧಿಸಿದ್ದ ಗಲ್ಲು ಶಿಕ್ಷೆಗೆ ಸಂಬಂಧಿಸಿದಂತೆ ಗುರುವಾರ ನಡೆದ ವಿಚಾರಣೆಯಲ್ಲಿ ಮುಂದಿನ ಆದೇಶ ಬರುವವವರೆಗೂ ಮರಣದಂಡನೆಯನ್ನು ತಡೆ ಹಿಡಿಯಬೇಕೆಂದು ಕೋರ್ಟ್ ತೀರ್ಪು ನೀಡಿತ್ತು.

ಪಾಕಿಸ್ತಾನದ ವಕೀಲ ಖಮರ್ಖುರೇಷಿ ಸರಿಯಾಗಿ ವಾದ ಮಂಡಿಸದ ಕಾರಣದಿಂದ ಸೋಲುಂಟಾಗಿದೆ ಎಂದು ಸರ್ಕಾರ, ಸೇನೆ ಹಾಗೂ ಮಾಧ್ಯಮಗಳು ಕೂಡ ಆಕ್ರೋಶ ವ್ಯಕ್ತಪಡಿಸಿ ವಕೀಲರನ್ನು ಬದಲಾಯಿಸುವಂತೆ ಆಗ್ರಹಿಸಿದ್ದವು. ಈ ಹಿನ್ನಲೆಯಲ್ಲಿ ಅಟಾರ್ನಿ ಜನರಲ್ ಖಮರ್ಖುರೇಷಿ ಅವರನ್ನು ನೇಮಕ ಮಾಡಲಾಗಿದೆ.