ಇರಾನ್'ನ ಸಂಸತ್ ಮೇಲೆ ಮೂವರು ಉಗ್ರರು ದಾಳಿ ನಡೆಸಿರುವ ಶಂಕೆ ಇದೆ. ಕೆಲ ವರದಿಗಳು ಮೂವರು ಉಗ್ರರ ದಾಳಿ ಎಂದು ತಿಳಿಸಿದರೆ, ಕೆಲ ವರದಿಗಳಲ್ಲಿ ಒಬ್ಬನೇ ಉಗ್ರನ ದಾಳಿಯಾಗಿದೆ ಎಂದಿದೆ. ಒಂದು ವರದಿ ಪ್ರಕಾರ, ಬಂದೂಕು ಹೊಂದಿದ್ದ ವ್ಯಕ್ತಿಯೊಬ್ಬ ಸಂಸತ್'ವೊಳಕ್ಕೆ ಪ್ರವೇಶಿಸಿ ಗುಂಡಿನ ದಾಳಿ ನಡೆಸಿದ್ದಾನೆ.​

ಟೆಹೆರಾನ್, ಇರಾನ್(ಜೂನ್ 07): ಇರಾನ್ ರಾಜಧಾನಿ ಟೆಹರಾನ್'ನಲ್ಲಿ ಸಂಸತ್ ಭವನ ಸೇರಿದಂತೆ ಎರಡು ಕಡೆ ಉಗ್ರಗಾಮಿಗಳು ದಾಳಿ ಎಸಗಿದ್ದಾರೆ. ಈ ದಾಳಿಯಲ್ಲಿ ಐವರು ದಾಳಿಕೋರರು ಸೇರಿದಂತೆ 7 ಮಂದಿ ಸಾವನ್ನಪ್ಪಿದ್ದಾರೆಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಸಂಸತ್ ಭವನ ಹಾಗೂ ಆಯತುಲ್ಲಾ ಖೊಮೇನಿ ಅವರ ಸಮಾಧಿ ಸ್ಥಳಗಳ ಮೇಲೆ ಶಂಕಿತ ಉಗ್ರರ ದಾಳಿಯಾಗಿದೆ. ಒಂದೇ ಗಂಟೆಯ ಅಂತರದಲ್ಲಿ ಈ ಎರಡು ಕಡೆ ದಾಳಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಂಸತ್ ಭವನಕ್ಕೆ ಮೂವರು ವ್ಯಕ್ತಿಗಳು ದಾಳಿ ಮಾಡಿದ್ದಾರೆ. ವ್ಯಕ್ತಿಯೊಬ್ಬ ಭವನದೊಳಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾನೆ. ಒಬ್ಬ ಭದ್ರತಾ ಸಿಬ್ಬಂದಿ ಬಲಿಯಾಗುತ್ತಾರೆ. ಇನ್ನೂ ಹಲವು ನಾಗರಿಕರು ಗಾಯಗೊಳ್ಳುತ್ತಾರೆ. ದಾಳಿ ಮಾಡಿದ ಮೂವರ ಪೈಕಿ ಒಬ್ಬನ ಬಳಿ ಪಿಸ್ತೂಲ್ ಇದ್ದರೆ, ಇನ್ನಿಬ್ಬರ ಬಳಿ ಎಕೆ-47 ರೈಫಲ್ ಇತ್ತೆನ್ನಲಾಗಿದೆ. ಸಂಸತ್ ಭವನದ ಒಳಗೆ ಮತ್ತೊ ಹೊರಗೆ ಕೂಡಲೇ ಬಿಗಿಭದ್ರತೆ ಒದಗಿಸಿದ ಭದ್ರತಾ ಪಡೆಗಳು ಎಲ್ಲಾ ಮೂವರು ಉಗ್ರರನ್ನು ಹತ್ಯೆಗೈದಿದ್ದಾರೆ.

ಮತ್ತೊಂದು ಘಟನೆಯಲ್ಲಿ ಆಯತೊಲ್ಲಾ ಖೊಮೇನಿ ಸಮಾಧಿ ಸ್ಥಳದ ಆವರಣಕ್ಕೆ ಒಬ್ಬ ಮಹಿಳೆ ಸೇರಿದಂತೆ ಇಬ್ಬರು ಸೂಸೈಡ್ ಬಾಂಬರ್ ದಾಳಿ ನಡೆಸಿರುವುದು ವರದಿಯಾಗಿದೆ. ಅಲ್ಲಿ, ಕೆಲಸ ಮಾಡುತ್ತಿದ್ದ ಕಾರ್ಮಿಕ ಬಲಿಯಾಗಿದ್ದಾರೆ. ಇನ್ನೂ ಹಲವು ಗಾಯಗೊಂಡಿದ್ದಾರೆ.

ಈ ಎರಡು ದಾಳಿಗಳನ್ನು ಯಾರು ಮಾಡಿದ್ದಾರೆ ಎಂಬ ಖಚಿತ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ. ದಾಳಿಗೆ ಕಾರಣವೂ ತಿಳಿದುಬಂದಿಲ್ಲ. ಯಾವ ಸಂಘಟನೆಯೂ ದಾಳಿಯ ಹೊಣೆ ಹೊತ್ತಿಲ್ಲ. ರಿಪಬ್ಲಿಕ್ ಟಿವಿ ಸೇರಿದಂತೆ ಕೆಲ ಮಾಧ್ಯಮಗಳ ವರದಿ ಪ್ರಕಾರ, ಇರಾನ್ ದಾಳಿಗಳ ಹಿಂದೆ ಐಸಿಸ್ ಕೈವಾಡವಿರುವ ಶಂಕೆ ಇದೆ.