ನಿನ್ನೆಯವರೆಗೂ ಗೊಂದಲ ತಾಳಿದ್ದ ಬೆಂಗಳೂರು ಪೊಲೀಸರು ಆರೋಪಿಯ ಬಗ್ಗೆ ಸ್ಪಷ್ಟ ನಿರ್ಧಾರ ತಾಳಿದ್ದಾರೆ. ಗೃಹ ಸಚಿವರು ಬಾಯ್ಬಿಟ್ಟು ಹೇಳಿದ್ದರೂ ನಮಗೆ ಮಾಹಿತಿಯೇ ಇಲ್ಲ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದರು. ಈಗ ಆಯುಕ್ತ ಪ್ರವೀಣ್​ ಸೂದ್​ ಅವರೆ ಇತನೇ ಪ್ರಮುಖ ಆರೋಪಿ ಎಂದು ಖಚಿತ ಪಡಿಸಿದ್ದಾರೆ.

ಚಿತ್ತೂರು(ಫೆ.04): ದೇಶಾದ್ಯಂತ ಕುತೂಹಲ ಕೆರಳಿಸಿದ್ದ ಬೆಂಗಳೂರಿನ ಎಟಿಎಂ'ನ ಅಮಾನವೀಯ ಹಲ್ಲೆ ಪ್ರಕರಣದ ಆರೋಪಿ ಮಧುಕರ್ ರೆಡ್ಡಿಯ ಬಂಧನವನ್ನು ಮುಕ್ತಾಯಗೊಳಿಸಿದ ಮದನಪಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ನಿನ್ನೆಯವರೆಗೂ ಗೊಂದಲ ತಾಳಿದ್ದ ಬೆಂಗಳೂರು ಪೊಲೀಸರು ಆರೋಪಿಯ ಬಗ್ಗೆ ಸ್ಪಷ್ಟ ನಿರ್ಧಾರ ತಾಳಿದ್ದಾರೆ. ಗೃಹ ಸಚಿವರು ಬಾಯ್ಬಿಟ್ಟು ಹೇಳಿದ್ದರೂ ನಮಗೆ ಮಾಹಿತಿಯೇ ಇಲ್ಲ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದರು. ಈಗ ಆಯುಕ್ತ ಪ್ರವೀಣ್​ ಸೂದ್​ ಅವರೆ ಇತನೇ ಪ್ರಮುಖ ಆರೋಪಿ ಎಂದು ಖಚಿತ ಪಡಿಸಿದ್ದಾರೆ.

ಇನ್ನು ಪರೇಡ್​ ವೇಳೆ ಸಿಕ್ಕಿಬಿದ್ದಿದ್ದ ಮಧುಕರ್​ ರೆಡ್ಡಿ, ಹೈದರಾಬಾದ್​ , ಮದನಪಲ್ಲಿ ಬೆಂಗಳೂರು ಮತ್ತು ಅನಂತಪುರ ಪೊಲೀಸರಿಗೂ ಬೇಕಾಗಿರುವ ಕುಖ್ಯಾತ ಕ್ರಿಮಿನಲ್. ಚಿತ್ತೂರಿನ ಮದನಪಲ್ಲಿ ಪೊಲೀಸರ ವಶದಲ್ಲಿರುವ ಮಧುಕರ್ ರೆಡ್ಡಿಯನ್ನು ತಮ್ಮ ಕಷ್ಟಡಿಗೆ ಒಪ್ಪಿಸುವಂತೆ ಬೆಂಗಳೂರು ಪೊಲೀಸರು ಮನವಿ ಮಾಡಿಕೊಳ್ಳುವ ಸಾದ್ಯತೆ ಇದೆ.