Asianet Suvarna News Asianet Suvarna News

ಜನವಸತಿ ಪ್ರದೇಶದಲ್ಲಿ ಪಾಕ್‌ ಸೇನಾ ವಿಮಾ​ನ ಪತನ, 19 ಜನರ ಸಾವು!

ಮನೆ ಮೇಲೆ ಪಾಕ್‌ ಸೇನಾ ವಿಮಾ​ನ ಬಿದ್ದು, 5 ಸೇನಾ ಸಿಬ್ಬಂದಿ ಸೇರಿ 19 ಜನರ ಸಾವ|  ರಾವ​ಲ್ಪಿಂಡಿ​ಯಲ್ಲಿ ಮಂಗ​ಳ​ವಾರ ಘಟನೆ

At least 19 killed as Pakistan army plane crashes into residential area
Author
Bangalore, First Published Jul 31, 2019, 8:43 AM IST
  • Facebook
  • Twitter
  • Whatsapp

ಇಸ್ಲಾ​ಮಾ​ಬಾ​ದ್‌[ಜು.31]: ಪಾಕಿ​ಸ್ತಾ​ನದ ಸೇನಾ ತರ​ಬೇತಿ ವಿಮಾ​ನ​ವೊಂದು ತರ​ಬೇತಿ ವೇಳೆಯೇ ಅಪ​ಘಾ​ತಕ್ಕೀ​ಡಾಗಿ ಇಬ್ಬರು ಪೈಲಟ್‌, ಮೂವರು ಸೇನಾ ಸಿಬ್ಬಂದಿ, 14 ನಾಗ​ರೀ​ಕರು ಸೇರಿ ಒಟ್ಟು 19 ಜನ ಸಾವನ್ನಪ್ಪಿ, 12 ಜನ ಗಾಯ​ಗೊಂಡ ಘಟನೆ ರಾವ​ಲ್ಪಿಂಡಿ​ಯಲ್ಲಿ ಮಂಗ​ಳ​ವಾರ ಜರು​ಗಿದೆ.

ರಾವ​ಲ್ಪಿಂಡಿ ಸಮೀ​ಪದ ಮೋರಾ ಕಾಲು ಉಪನ​ಗ​ರ​ದಲ್ಲಿ ಈ ದುರ್ಘ​ಟನೆ ಸಂಭ​ವಿ​ಸಿದೆ. ತರ​ಬೇ​ತಿ ಹಾರಾ​ಟದ ವೇಳೆ ಸೇನಾ ವಿಮಾನ ನಾಗ​ರಿಕ ವಸತಿ ಪ್ರದೇ​ಶ​ದಲ್ಲಿ ಬಿದ್ದ ಪರಿ​ಣಾಮ ಮನೆ​ಗ​ಳ​ಲ್ಲಿದ್ದ ನಾಗ​ರೀ​ಕರು ಹೆಚ್ಚಿನ ಸಂಖ್ಯೆ​ಯಲ್ಲಿ ಸಾವಿ​ಗೀ​ಡಾ​ಗಿದ್ದು, ಸುಮಾರು 4-5 ಮನೆ​ಗಳೂ ಸಹ ಸಂಪೂರ್ಣ ಹಾನಿ​ಗೀ​ಡಾ​ಗಿ​ವೆ.

ಈ ಘಟ​ನೆ​ಯಲ್ಲಿ ಗಾಯ​ಗೊಂಡ​ವ​ರೆಲ್ಲರೂ ತೀವ್ರ​ವಾದ ಗಾಯ ಮತ್ತು ಆಘಾ​ತಕ್ಕೆ ಒಳ​ಗಾ​ಗಿದ್ದು, ಅವ​ರನ್ನು ರಾವ​ಲ್ಪಿಂಡಿ ಸೇರಿ​ದಂತೆ ವಿವಿಧ ಆಸ್ಪ​ತ್ರೆ​ಗ​ಳಿಗೆ ದಾಖ​ಲಿ​ಸ​ಲಾ​ಗಿದೆ.

Follow Us:
Download App:
  • android
  • ios