ನೋಟ್ ಬ್ಯಾನ್ ಹಾಗೂ ಇನ್ನಿತರ ಯೋಜನೆಗಳು ಚುನಾವಣಾ ಫಲಿತಾಂಶದಲ್ಲಿ ಹೇಗೆ ಪರಿಣಾಮ ಬೀರಲಿದೆ ಎಂಬುದು ಮಾರ್ಚ್' 11 ರಂದು ಲಭ್ಯವಾಗುವ ಫಲಿತಾಂಶದಿಂದ ತಿಳಿಯಲಿದೆ.
ಲಖನೌ(ಫೆ.11): ಉತ್ತರ ಪ್ರದೇಶದಲ್ಲಿ 73 ಕ್ಷೇತ್ರಗಳಿಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.64 ರಷ್ಟು ಮತದಾನವಾಗಿದೆ. ದೇಶದ ಅತೀ ಹೆಚ್ಚು ಜನಸಂಖ್ಯೆಯಿರುವ ರಾಜ್ಯದಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಇದು 2019ರಲ್ಲಿ ಲೋಕಸಭೆಗೆ ನಡೆಯುವ ನಡೆಯುವ ಸೆಮಿಫೈನಲ್ ಎಂದೇ ಬಿಂಬಿತವಾಗಿದೆ. 2012ರಲ್ಲಿ ನಡೆದ ಮತದಾನಕ್ಕಿಂತ ಈ ಬಾರಿ ಶೇ.3 ರಷ್ಟು ಹೆಚ್ಚಿಗೆಯಾಗಿದೆ. 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಅತೀ ಹೆಚ್ಚು ಸ್ಥಾನ ಗಳಿಸಿತ್ತು. ನೋಟ್ ಬ್ಯಾನ್ ಹಾಗೂ ಇನ್ನಿತರ ಯೋಜನೆಗಳು ಚುನಾವಣಾ ಫಲಿತಾಂಶದಲ್ಲಿ ಹೇಗೆ ಪರಿಣಾಮ ಬೀರಲಿದೆ ಎಂಬುದು ಮಾರ್ಚ್' 11 ರಂದು ಹೊರಬೀಳುವ ಫಲಿತಾಂಶದಿಂದ ತಿಳಿಯಲಿದೆ.
