ಮೌಢ್ಯ ವಿರೋಧ ಮಸೂದೆಗೆ ಸಂಪುಟದಲ್ಲಿ ಅನುಮೋದನೆ ಸಿಕ್ಕಿದ್ದು, ಮುಂಬರುವ ವಿಧಾನಸಭೆ ಅಧಿವೇಶನದಲ್ಲೇ ಅದನ್ನು ಅಂಗೀಕರಿಸುವ ಮೂಲಕ ಕಾನೂನಾಗಿ ಜಾರಿಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ದಾವಣಗೆರೆ: ಮೌಢ್ಯ ವಿರೋಧ ಮಸೂದೆಗೆ ಸಂಪುಟದಲ್ಲಿ ಅನುಮೋದನೆ ಸಿಕ್ಕಿದ್ದು, ಮುಂಬರುವ ವಿಧಾನಸಭೆ ಅಧಿವೇಶನದಲ್ಲೇ ಅದನ್ನು ಅಂಗೀಕರಿಸುವ ಮೂಲಕ ಕಾನೂನಾಗಿ ಜಾರಿಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಿತ್ಯವೂ ಬೆಳಗ್ಗೆ ಟಿವಿಗಳಲ್ಲಿ ಜ್ಯೋತಿಷ್ಯ ನೋಡುವವರ ಸಂಖ್ಯೆ ಹೆಚ್ಚುತ್ತಿದೆ. ಭವಿಷ್ಯವೆಲ್ಲಾ ಸತ್ಯಕ್ಕೆ ದೂರವಾದುದು. ಮೌಢ್ಯ ರಹಿತ ಸಮಾಜ ನಿರ್ಮಾಣ ಸಾಕಾರಗೊಳಿಸಲು ತಮ್ಮ ಸರ್ಕಾರ ಒತ್ತು ನೀಡಿದೆ ಎಂದು ಸ್ಪಷ್ಟಪಡಿಸಿದರು.