ಬೆಂಗಳೂರು [ ಆ.03]: ರಾಜ್ಯದಲ್ಲಿ ದೋಸ್ತಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡಿದೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. 

ಇದೇ ಸಂದರ್ಭದಲ್ಲಿ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರಿಗೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿಯಲಾಗಿದೆ.  ಅರ್ಜುನ ಅವಧೂತ ಗುರೂಜಿ ಸಿ.ಟಿ ರವಿ ಅವರಿಗೆ ಮುಖ್ಯಮಂತ್ರಿಯಾಗುವ ಯೋಗವಿದೆ ಎಂದು ಹೇಳಿದ್ದಾರೆ. 

ರಮೇಶ್‌ ಜಾರಕಿಹೊಳಿ ಮನೆಗೆ ಯೋಗೇಶ್ವರ್‌!

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಭಕ್ತರ ಮನೆಗೆ ಭೇಟಿ ನೀಡಿದ್ದ ಅರ್ಜುನ ಅವಧೂತ ಸ್ವಾಮೀಜೀ  ಮುಂದಿನ ಎರಡು ವರ್ಷಗಳ ನಂತರ ಸಿ.ಟಿ. ರವಿ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದರು. 

ಅತೃಪ್ತರ ಸಹಾಯ ಒಪ್ಪಿಕೊಂಡ ಬಿಜೆಪಿ ನಾಯಕ ? ಮಂತ್ರಿ ಸ್ಥಾನ ಪಕ್ಕಾ!

ಈಗಾಗಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದ್ದು, ವಾರಗಳು ಕಳೆದರೂ ಕೂಡ ಸಂಪುಟ ವಿಸ್ತರಣೆಯಾಗಿಲ್ಲ. ಹೈ ಕಮಾಂಡ್ ಒಪ್ಪಿಗೆ ದೊರೆಯಲು ಕಾಯುತ್ತಿದ್ದು, ಸಿ.ಟಿ ರವಿ ಹೆಸರು ಇದೀಗ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿ ಬರುತ್ತಿದೆ. ಇದರ ನಡುವೆ ಮುಖ್ಯಮಂತ್ರಿ ಯೋಗದ ಬಗ್ಗೆ ಸ್ವಾಮೀಜಿಯೋರ್ವರು ಭವಿಷ್ಯ ನುಡಿದಿದ್ದಾರೆ.