ಬೆಂಗಳೂರು [ಜು.24]: ‘ಜಗದೀಶ್‌ ಶೆಟ್ಟರ್‌ ಬಜೆಟ್‌ ಮಂಡನೆಗೆ ಡೇಟ್‌ ಇಟ್ಟುಕೊಟ್ಟೆ, ಆದರೆ ನೀವು (ಸಭಾಧ್ಯಕ್ಷರು) ಸದನವನ್ನು ಶುರು ಮಾಡಿದ್ದೆ ಯಮಗಂಡ ಕಾಲದಲ್ಲಿ ಇನ್ನೇನು ಹೇಳಲಿ’ ಎಂದು ಸಚಿವ ಎಚ್‌.ಡಿ.ರೇವಣ್ಣ ಹೇಳಿಕೆಯು ಸದನದಲ್ಲಿ ನಗೆ ಮೂಡಿಸಿತು.

ವಿಶ್ವಾಸ ಮತಯಾಚನೆ ಮೇಲೆ ಮಂಗಳವಾರ ಮಾತನಾಡಿದ ಸಚಿವ ರೇವಣ್ಣ, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಆಡಳಿತದ ಅವಧಿಯಲ್ಲಿ ಬಜೆಟ್‌ ಮಂಡನೆ ಮಾಡಲು ಬಿಜೆಪಿಯಲ್ಲಿಯೇ ವಿರೋಧ ಇತ್ತು. ಆಗ ಅವರಿಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಡೇಟ್‌ ಇಟ್ಟುಕೊಟ್ಟೆ. ಯಾವುದೇ ಸಮಸ್ಯೆಯಾಗದೆ ಬಜೆಟ್‌ ಮಂಡಿಸಿದರು ಎಂದರು. ಆಗ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ರಮೇಶ್‌ಕುಮಾರ್‌, ನನಗೆ ಎಂದಾದರೂ ಡೇಟ್‌ ಕೊಟ್ಟಿದ್ದೀರಾ ಎಂದು ಕಿಚಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ಸದನವನ್ನು ಶುರು ಮಾಡಿದ್ದೆ ಯಮಗಂಡ ಕಾಲದಲ್ಲಿ, ಇನ್ನೇನು ನಿಮಗೆ ಹೇಳಲಿ ಎಂದು ತಿಳಿಸಿದರು. ಆಗ ರಮೇಶ್‌ ಕುಮಾರ್‌, 10 ಗಂಟೆಯ ಬದಲು 10.30ಕ್ಕೆ ಮುಂದೂಡುವಂತೆ ತಿಳಿಸಿದರು. ಆದರೆ, ನನಗೆ ಅದರಲ್ಲಿ ನಂಬಿಕೆ ಇಲ್ಲ ಎಂದು ಹೇಳಿದರು.