ಚುನಾವಣೆ ಬಿಸಿ ಏರಿಸಿದ ಶ್ರಬಂತಿ, ಡ್ರೆಸ್ ಮೂಲಕ ಸದ್ದು ಮಾಡಿದ ನಟಿ; ಮಾ.19ರ ಟಾಪ್ 10 ಸುದ್ದಿ!
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಸಿದ್ಧ ನಟಿ ಶ್ರಬಂತಿ ಚಟರ್ಜಿಯನ್ನು ಕಣಕ್ಕಿಳಿಸಿ ಬಿಸಿ ಏರಿಸಿದೆ. ರಾಹುಲ್ ದಿಕ್ಕು ತಪ್ಪಿಸಿದ್ದಕ್ಕೆ ಮಾಜಿ ಸಿಎಂಗೆ ಚುನಾವಣೆ ಟಿಕೆಟ್ ನಿರಾಕರಿಸಲಾಗಿದೆ. ಆಸ್ಕರ್ ಫರ್ನಾಂಡೀಸ್ ಹಳೇ ವೀಡಿಯೋ ಈಗ ವೈರಲ್ ಆಗಿದೆ. ವಿರಾಟ್ ಕೊಹ್ಲಿ ಮೈದಾನ ತೊರೆದಿದ್ದೇಕೆ? ಕೆನರಾ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್ ಸೇರಿದಂತೆ ಮಾರ್ಚ್ 19ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಬಿಜೆಪಿಯಿಂದ ಸ್ಪರ್ಧಿಸ್ತಿರೋ ಬೆಂಗಾಲಿ ನಟಿ ಇವರೇ: ಶ್ರಬಂತಿ ಚಟರ್ಜಿ...
ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಸಿದ್ಧ ನಟಿಯನ್ನು ಕಣಕ್ಕಿಳಿಸಿದೆ. ಹಿರಿಯ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖಂಡ ಮತ್ತು ರಾಜ್ಯ ಸಚಿವ ಪಾರ್ಥಾ ಚಟರ್ಜಿ ಅವರನ್ನು ಬೆಹಲಾ ವೆಸ್ಟ್‌ನಲ್ಲಿ ಜನಪ್ರಿಯ ಬೆಂಗಾಲಿ ನಟಿ ಶ್ರಬಂತಿ ಚಟರ್ಜಿ ಎದುರಿಸಲಿದ್ದಾರೆ.
ಗೋಮೂತ್ರದಿಂದ ಕ್ಯಾನ್ಸರ್ ಗೆದ್ದೆ : ಆಸ್ಕರ್ ಫರ್ನಾಂಡೀಸ್ ಹಳೇ ವೀಡಿಯೋ ಈಗ ವೈರಲ್...
'ನಾನು ಕ್ಯಾನ್ಸರ್‌ನಿಂದ ಬಳಲುತ್ತಿದ್ದೆ. ಕ್ಯಾನ್ಸರ್‌ನಿಂದ ಗುಣಮುಖವಾಗಲು ಯಾವುದೇ ಟ್ರೀಟ್‌ಮೆಂಟ್ ಇರಲಿಲ್ಲ, ಕೊನೆಗೆ ಈ ಆಶ್ರಮಕ್ಕೆ ಬಂದೆ. ಇಲ್ಲಿನ ಗೋಮೂತ್ರದಿಂದ ಕ್ಯಾನ್ಸರನ್ನು ಗೆದ್ದೆ' ಎಂದು ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ರಾಜ್ಯಸಭೆಯಲ್ಲಿ ಹೇಳಿರುವ ಹಳೇ ವೀಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ರಾಹುಲ್ ದಿಕ್ಕು ತಪ್ಪಿಸಿದ್ದಕ್ಕೆ ಮಾಜಿ ಸಿಎಂಗೆ ಚುನಾವಣೆ ಟಿಕೆಟ್ ಇಲ್ಲ...
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನೇ ದಿಕ್ಕು ತಪ್ಪಿಸಿದ್ದಕ್ಕಾಗಿ ಕಾಂಗ್ರೆಸ್ ಮಾಜಿ ಸಿಎಂ ಗೆ ಚುನಾವಣಾ ಟಿಕೆಟ್ ನಿರಾಕರಿಸಲಾಗಿದ್ದು, ಉಸ್ತುವಾರಿಯನ್ನಷ್ಟೇ ಮಾಡಿ ಶಿಕ್ಷೆ ನೀಡಲಾಗಿದೆ.
ಪಂದ್ಯದ ಮಹತ್ವದ ಘಟ್ಟದಲ್ಲಿ ವಿರಾಟ್ ಕೊಹ್ಲಿ ಮೈದಾನ ತೊರೆದಿದ್ದೇಕೆ..?...
ಇಂಗ್ಲೆಂಡ್ ವಿರುದ್ದ 4ನೇ ಟಿ20 ಪಂದ್ಯದ ಕೊನೆಯ ನಾಲ್ಕು ಓವರ್‌ಗಳು ಬಾಕಿ ಇದ್ದಾಗ ಪಂದ್ಯ ರೋಚಕ ಹಂತ ತಲುಪಿತ್ತು. ಇಂತಹ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮೈದಾನ ತೊರೆದಿದ್ದರು. ಇದು ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲಗಳನ್ನುಂಟು ಮಾಡಿತ್ತು.
ಪಿಗ್ಗಿಯ ಈ ಡ್ರೆಸ್ ಬೆಲೆ ಕೇಳಿದ್ರಾ..? ಆರಾಮವಾಗಿ 4 ತಿಂಗಳು ಜೀವನ ನಡೆಸ್ಬೋದು...
ಸೆಲೆಬ್ರಿಟಿಗಳ ಉಡುಪಿನ ಬಗ್ಗೆ ಹೇಳಬೇಕಾ..? ಬಾಲಿವುಡ್ ನಟಿ ಪಿಗ್ಗಿಯ ಈ ಬ್ಲೂ ಡ್ರೆಸ್ ಬೆಲೆ ಗೊತ್ತಾ..? ಏನಿಲ್ಲಾಂದ್ರೂ 4 ತಿಂಗಳು ಆರಾಮವಾಗಿ ಜೀವನ ನಡೆಸ್ಬೋದು
ಕೆನರಾ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್...
ನೀವ್ ಕೆನರಾ ಬ್ಯಾಂಕ್ ಗ್ರಾಹಕರಾಗಿದ್ದಲ್ಲಿ ಚಿಂತಿಸುವ ಅಗತ್ಯವಿಲ್ಲ. ಯಾಕೆಂದರೆ ಇದು ಸೇಫೆಸ್ಟ್ ಬ್ಯಾಂಕ್ ಎನಿಸಿಕೊಳ್ಳಲಿದೆ.
15 ವರ್ಷಕ್ಕಿಂತ ಹಳೆ ವಾಹನ ಮಾಲಿಕರಿಗೆ ಬಿಗ್ ಶಾಕ್ : ಭಾರಿ ದುಬಾರಿ ಶುಲ್ಕ...
15 ವರ್ಷಕ್ಕಿಂತಲೂ ಹಳೆಯ ವಾಹನಗಳನ್ನು ಹೊಂದಿರುವ ವಾಹನ ಮಾಲಿಕರಿಗೆ ಇಲ್ಲಿದೆ ಬಿಗ್ ಶಾಕ್. ಆರ್ ಸಿ ನೋಂದಣಿ ಶುಲ್ಕ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.
ಬಿಇಸಿಐಎಲ್‌ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ...
ಸರ್ಕಾರಿ ಸ್ವಾಮ್ಯದ ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿ. (BICIL) ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ ಪರ್ಸನಲ್ ಅಸಿಸ್ಟೆಂಟ್ ಹುದ್ದೆಗಳಿಂದ ಹಿಡಿದು ಟೆಕ್ನಿಷಿಯನ್‌ಗಳ ಹುದ್ದೆಗಳವರೆಗೂ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಎಲ್ಲ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 29 ಕೊನೆಯ ದಿನವಾಗಿದೆ. ಹಾಗಾಗಿ, ಅಭ್ಯರ್ಥಿಗಳು ತ್ವರಿತವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಮಹಾನಾಯಕ ಕುಮಾರಸ್ವಾಮಿಯೇ ಇರ್ಬೇಕು, ಮೊದಲು ಅವರ ಹೇಳಿಕೆ ಪಡೆಯಲಿ'...
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಹಿಂದಿನ ಮಹಾನಾಯಕನ ವಿಚಾರ ಈವರೆಗೆ ಡಿ.ಕೆ. ಶಿವಕುಮಾರ್ ಸುತ್ತ ತಿರುಗುತ್ತಿತ್ತು. ಇದೀಗ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮೇಲೆ ಗಂಭೀರ ಆರೋಪ ಮಾಡಲಾಗಿದೆ