ಬೆಳಗಾವಿ ಜಿಲ್ಲೆಯಲ್ಲಿ ತಾಲೂಕುವಾರು ಜಿದ್ದಾಜಿದ್ದಿ ಕಾದಾಟ ಹೇಗಿದೆ? ಯಾವ್ಯಾವ ತಾಲೂಕಲ್ಲಿ ಯಾರ್ಯಾರ ಹವಾ ಜೋರಾಗಿದೆ?

Assembly Constituency of Belagavi District
Highlights

ಬೆಳಗಾವಿ ಜಿಲ್ಲೆಯ ತಾಲೂಕುಗಳಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಸ್ ಸ್ಥಿತಿ ಹೀಗಿದೆ. 

ಬೆಳಗಾವಿ (ಫೆ. 15): ಬೆಳಗಾವಿ ಜಿಲ್ಲೆಯ ತಾಲೂಕುಗಳಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಸ್ ಸ್ಥಿತಿ ಹೀಗಿದೆ. 

ಸವದತ್ತಿ  ಮತ 1,85,804

ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಗ್ಗಂಟು  

ಶಾಸಕ ವಿಶ್ವನಾಥ ಮಾಮನಿ ಇಲ್ಲಿ ಬಿಜೆಪಿ ಅಭ್ಯರ್ಥಿಯಾಗುವುದು  ಬಹುತೇಕ ನಿಶ್ಚಿತ. ಕಾಂಗ್ರೆಸ್ಸಿನಿಂದ ಸ್ಪರ್ಧಿಸಲು ಪಂಚನಗೌಡ ದ್ಯಾಮನಗೌಡರ, ಆನಂದ ಚೋಪ್ರಾ, ವಿಶ್ವಾಸ ವೈದ್ಯ, ಎಸ್.ಎಸ್. ಕೌಜಲಗಿ ಮುಂತಾದವರು ಭಾರಿ ಪ್ರಯತ್ನ ನಡೆಸುತ್ತಿದ್ದು, ಆಕಾಂಕ್ಷಿಗಳ ಪಟ್ಟಿ ಹೆಚ್ಚಿದೆ. ಕಾಂಗ್ರೆಸ್ ಆಕಾಂಕ್ಷಿಗಳು ಹೆಚ್ಚಾಗಿರುವುದರಿಂದ ಬಂಡಾಯದ ಬಾವುಟ ಹಾರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಬಸನಗೌಡ ದೊಡ್ಡಗೌಡ ಪಾಟೀಲ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಂಭವವಿದೆ. ಕಳೆದ ಬಾರಿ ಕಾಂಗ್ರೆಸ್ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಆನಂದ ಚೋಪ್ರಾ ಅವರಿಗೆ ಟಿಕೆಟ್ ದೊರೆಯದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. ಹೀಗಾಗಿ ಕಾಂಗ್ರೆಸ್ಸಿಗೆ ಟಿಕೆಟ್ ಹಂಚಿಕೆ ಕಗ್ಗಂಟಾಗಿದೆ.

ಸಣ್ಣ ಕೈಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ರಮೇಶ ಜಾರಕಿಹೊಳಿ ಅವರೇ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಕ್ಷೇತ್ರದ ಮೇಲೆ  ಈಗಾಗಲೇ ಅವರು ಪ್ರಬಲ ಹಿಡಿತ ಸಾಧಿಸಿದ್ದಾರೆ. ಕಳೆದ ಬಾರಿ ಇವರ ವಿರುದ್ಧ ಪರಾಜಿತಗೊಂಡಿದ್ದ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಈಗ ಬಿಜೆಪಿ ಸೇರಿದ್ದಾರೆ. ಅವರಿಗೆ ಬಿಜೆಪಿ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ.

ಗೋಕಾಕ ಮತ 2,34,815

ಜಾರಕೀಹೊಳಿ ವಿರುದ್ಧ ತಂತ್ರ

ಸಣ್ಣ ಕೈಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ರಮೇಶ ಜಾರಕಿಹೊಳಿ ಅವರೇ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಕ್ಷೇತ್ರದ ಮೇಲೆ ಈಗಾಗಲೇ ಅವರು ಪ್ರಬಲ ಹಿಡಿತ ಸಾಧಿಸಿದ್ದಾರೆ. ಕಳೆದ ಬಾರಿ ಇವರ ವಿರುದ್ಧ ಪರಾಜಿತಗೊಂಡಿದ್ದ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಈಗ ಬಿಜೆಪಿ ಸೇರಿದ್ದಾರೆ. ಅವರಿಗೆ ಬಿಜೆಪಿ ಟಿಕೆಟ್ನೀಡುವುದು ಬಹುತೇಕ ಖಚಿತವಾಗಿದೆ.  ಬಿಪಿಯಿಂದ ಮಾಜಿ ಶಾಸಕ ಎಂ.ಎಲ್. ಮುತ್ತೆಣ್ಣವರ, ಸದಾಶಿವ ಸವತೆಕಾಯಿ ಮೊದಲಾದವರ ಹೆಸರು ಕೇಳಿಬರುತ್ತಿವೆ. ಜೆಡಿಎಸ್‌ನಿಂದ ಎರಡು ಬಾರಿ ಸೋತು ಸೋಲನ್ನಪ್ಪಿದ್ದ ಅಶೋಕ ಪೂಜಾರಿ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿರುವುದು ಕ್ಷೇತ್ರದ ರಾಜಕಾರಣದಲ್ಲಿ ಸಂಚಲನವನ್ನೇ ಮೂಡಿಸಿದೆ. ರಮೇಶ ಜಾರಕಿಹೊಳಿ ಅವರ ಗೆಲವಿನ ಓಟಕ್ಕೆ ಬ್ರೇಕ್ ಹಾಕಲು ಜೆಡಿಎಸ್ ಬಿಜೆಪಿ ಮುಖಂಡರು  ರಣತಂತ್ರ ರೂಪಿಸುತ್ತಿದ್ದಾರೆ. ಪ್ರತಿಷ್ಠಿತ ಕಣವಾದ ಗೋಕಾಕ ಕ್ಷೇತ್ರದಲ್ಲಿ
ಕಾಂಗ್ರೆಸ್- ಬಿಜೆಪಿ ನಡುವೆ ನೇರ ಹಣಾಹಣಿ ನಡೆಯುವ ಸಾಧ್ಯತೆ ಇದೆ. ಆದರೆ, ಜೆಡಿಎಸ್‌ನಿಂದ ಯಾರು ಸ್ಪರ್ಧಿಸುತ್ತಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ. ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿರುವ ಜಾರಕಿಹೊಳಿ
ಅವರು ಈ ಕ್ಷೇತ್ರದಲ್ಲಿ ಜಯಭೇರಿ ಬಾರಿಸುವುದು ಮಾತ್ರವಲ್ಲದೆ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಿಸುವ ಹೊಣೆಗಾರಿಕೆ ಹೊತ್ತಿದ್ದಾರೆ.

ಬೆಳಗಾವಿ ಗ್ರಾಮೀಣ ಮತ 2,13,781

ಲಿಂಗಾಯಿತ  ಮತ ವಿಭಜನೆ ಭೀತಿ 

ಸತತ ಎರಡು ಬಾರಿ ಗೆದ್ದಿರುವ ಬಿಜೆಪಿಯ ಹಾಲಿ ಶಾಸಕ ಸಂಜಯ ಪಾಟೀಲ ಹಾಗೂ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಕ್ಷೇತ್ರದಲ್ಲಿ ಮರಾಠರು, ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕಿಯಾಗಿರುವ ಹೆಬ್ಬಾಳ್ಕರ್ ಕಳೆದ ಬಾರಿ ಕಡಿಮೆ ಮತಗಳಿಂದ ಪರಾಭವಗೊಂಡಿದ್ದರು. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದರೂ ಈ ಬಾರಿ ಗೆಲ್ಲಲೇಬೇಕು ಎಂದು ಲಕ್ಷ್ಮೀ ಪ್ರಯತ್ನಿಸಿದ್ದಾರೆ. ತಡೆಯೊಡ್ಡಲು ಶಾಸಕ ಪಾಟೀಲ ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿರುವ ಎಪಿಎಂಸಿ ಮಾಜಿ ಅಧ್ಯಕ್ಷ ಶಿವನಗೌಡ ಪಾಟೀಲ ಕೂಡ ಲಿಂಗಾಯತರೇ. ಹೀಗಾಗಿ ಆ ಸಮುದಾಯದ ಮತ ವಿಭಜನೆ ಸಾಧ್ಯತೆ ಇದೆ. 

ಸತತ ಮೂರು ಬಾರಿ ಗೆದ್ದಿರುವ ಕಾಂಗ್ರೆಸ್‌ನ ಫಿರೋಜ್ ಸೇಠ್ ಮತ್ತೆ  ಕಣಕ್ಕಿಳಿಯಲಿದ್ದಾರೆ. ಆದರೆ, ಕ್ಷೇತ್ರದ ಮೇಲೆ ಈಗಾಗಲೇ ಪ್ರತಿಷ್ಠಿತ ರಾಜಕಾರಣಿಗಳ ಕಣ್ಣು ಬಿದ್ದಿದೆ. ಅನಿಲ ಬೆನಕೆ, ಕಿರಣ ಜಾಧವ ಹೆಸರು ಬಿಜೆಪಿಯಿಂದ ಕೇಳಿಬರುತ್ತಿದೆ. ಬಿಜೆಪಿ ಟಿಕೆಟ್ ಸಿಗದಿದ್ದರೆ ಅನಿಲ ಬೆನಕೆ ಎಂಇಎಸ್ ಅಭ್ಯರ್ಥಿಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಬಿಜೆಪಿಗೆ ಇಲ್ಲಿ ಪ್ರಬಲ ಅಭ್ಯರ್ಥಿಯ ಕೊರತೆಯಿದೆ. ಹೀಗಾಗಿ ಮಾಜಿ ಸಚಿವ ಉಮೇಶ್ ಕತ್ತಿ ಈ ಕ್ಷೇತ್ರದಿಂದ ತಮ್ಮ ಪುತ್ರನಿಗೆ ಟಿಕೆಟ್ ಬೇಡಿಕೆ ಇಟ್ಟಿದ್ದಾರೆ. ಆದರೆ, ಬಿಜೆಪಿಯಿಂದ ಇನ್ನೂ ಭರವಸೆ ಸಿಕ್ಕಿಲ್ಲ. ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಎಂಇಎಸ್‌ನ ರೇಣು ಕಿಲ್ಲೇಕರ ಮತ್ತೆ ಸ್ಪರ್ಧಿಸಲಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಗೆ ಎಂಇಎಸ್‌ನವರೇ ಎದುರಾಳಿ. 

ಬೆಳಗಾವಿ ದಕ್ಷಿಣ ಮತಗಳು 2,27,000 

ಎಂ ಡಿ ಲಕ್ಷ್ಮೀನಾರಾಯಣ ಆಕಾಂಕ್ಷಿ 

ಕಳೆದ ಬಾರಿ ಪಕ್ಷೇತರ (ಎಂಇಎಸ್) ಅಭ್ಯರ್ಥಿಯಾಗಿ ಗೆದ್ದು ಬಂದ ಸಂಭಾಜಿ  ಪಾಟೀಲ ಮರು ಆಯ್ಕೆ ಬಯಸಿ ಚುನಾವಣಾ ಕಣಕ್ಕಿಳಿಯಲಿದ್ದಾರೆ. ಬಿಜೆಪಿಯಿಂದ ಮಾಜಿ ಶಾಸಕ ಅಭಯ ಪಾಟೀಲ ಆಕಾಂಕ್ಷಿ. ಪಾಂಡುರಂಗ ಧೋತ್ರೆ ಸೇರಿದಂತೆ ಹಲವರ ಹೆಸರು ಕೂಡ ಕೇಳಿಬರುತ್ತಿವೆ. ಕಾಂಗ್ರೆಸ್‌ನಿಂದ ವಿಧಾನ ಪರಿಷತ್ ಸದಸ್ಯ, ತುಮಕೂರು ಮೂಲದ ಎಂ.ಡಿ. ಲಕ್ಷ್ಮೀನಾರಾಯಣ ಸ್ಪರ್ಧಿಸುವ ಸಾಧ್ಯತೆ ಇದೆ. ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಕೂಡ ಕಾಂಗ್ರೆಸ್  ಟಿಕೆಟ್‌ಗೆ ಕೋರಿಕೆ ಇಟ್ಟಿದ್ದಾರೆ. ಎಂಇಎಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿದ್ದು, ಎಂಇಎಸ್‌ಗೆ ಮುಳುವಾಗಲಿದೆ. 

ಬೆಳಗಾವಿ ಉತ್ತರ ಮತ 2, 25, 000 

ಕತ್ತಿ ಪುತ್ರನಿಗೆ ಟಿಕೆಟ್ ಸಿಗುತ್ತಾ? 

ಸತತ ಮೂರು ಬಾರಿ ಗೆದ್ದಿರುವ ಕಾಂಗ್ರೆಸ್‌ನ ಫಿರೋಜ್ ಸೇಠ್ ಮತ್ತೆ ಕಣಕ್ಕಿಳಿಯಲಿದ್ದಾರೆ. ಆದರೆ, ಕ್ಷೇತ್ರದ ಮೇಲೆ ಈಗಾಗಲೇ ಪ್ರತಿಷ್ಠಿತ ರಾಜಕಾರಣಿಗಳ ಕಣ್ಣು ಬಿದ್ದಿದೆ. ಅನಿಲ ಬೆನಕೆ, ಕಿರಣ ಜಾಧವ ಹೆಸರು ಬಿಜೆಪಿಯಿಂದ ಕೇಳಿಬರುತ್ತಿದೆ. ಬಿಜೆಪಿ ಟಿಕೆಟ್ ಸಿಗದಿದ್ದರೆ ಅನಿಲ ಬೆನಕೆ ಎಂಇಎಸ್ ಅಭ್ಯರ್ಥಿಯಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಬಿಜೆಪಿಗೆ ಇಲ್ಲಿ ಪ್ರಬಲ ಅಭ್ಯರ್ಥಿಯ ಕೊರತೆಯಿದೆ. ಹೀಗಾಗಿ ಮಾಜಿ ಸಚಿವ ಉಮೇಶ್ ಕತ್ತಿ ಈ ಕ್ಷೇತ್ರದಿಂದ ತಮ್ಮ ಪುತ್ರನಿಗೆ ಟಿಕೆಟ್ ಬೇಡಿಕೆ ಇಟ್ಟಿದ್ದಾರೆ. ಆದರೆ, ಬಿಜೆಪಿಯಿಂದ ಇನ್ನೂ ಭರವಸೆ ಸಿಕ್ಕಿಲ್ಲ. ಕಳೆದ ಚುನಾವಣೆಯಲ್ಲಿ
ಪರಾಭವಗೊಂಡಿದ್ದ ಎಂಇಎಸ್‌ನ ರೇಣು ಕಿಲ್ಲೇಕರ ಮತ್ತೆ ಸ್ಪರ್ಧಿಸಲಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಗೆ ಎಂಇಎಸ್‌ನವರೇ ಎದುರಾಳಿ.

 

 

 

loader