ಕುಂದಗೋಳ :  ಕುಂದಗೋಳ ಉಪ ಚುನಾವಣಾ ಕಣ ರಂಗೇರಿದೆ. ವಿವಿಧ ನಾಯಕರು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದಾರೆ. 

ಕುಂದಗೋಳ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡರ ಪರ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಯಡಿಯೂರಪ್ಪ, ನಮ್ಮ ಅಭ್ಯರ್ಥಿ  ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ ಎನ್ನುವ ವಿಶ್ವಾಸ ಇದೆ. ಎಲ್ಲಾ ಕಡೆ ಜನ ಅಭಿಮಾನದಿಂದ ಬರುತ್ತಿದ್ದಾರೆ. ನಮ್ಮ ಕಾರ್ಯಕರ್ತರೂ ನಮ್ಮ ಜೊತೆಗಿದ್ದಾರೆ ಎಂದರು. 

ಈ ಮೂರು ಕ್ಷೇತ್ರದಲ್ಲಿ JDS ಗೆಲುವು ಖಚಿತ - ಶಿವಮೊಗ್ಗ ಬಿಜೆಪಿಗೆ : ಜ್ಯೋತಿಷಿ ಭವಿಷ್ಯ

ಇನ್ನು ಕಾಂಗ್ರೆಸ್, ಜೆಡಿಎಸ್ ಶಾಸಕರು ಬಿಜೆಪಿಗೆ ಬರಲು ರೆಡಿ ಇದ್ದಾರೆ ಎನ್ನುವ ವಿಚಾರ ಪ್ರಸ್ತಾಪಿಸಿ,  ತಾವು ಆ ರೀತಿಯಾದ ಹೇಳಿಕೆ ನೀಡಿಲ್ಲ. ಕಾಂಗ್ರೆಸ್ ಜೆಡಿಎಸ್ ನಲ್ಲಿ ಒಡಕು ಶುರುವಾಗಿದೆ, ಅನೇಕ ಕಾಂಗ್ರೆಸ್ ಶಾಸಕರು ಅತೃಪ್ತರಿದ್ದಾರೆ. ಅವರು ಏನು ಬೇಕಾದರೂ ‌ತೀರ್ಮಾನ ತೆಗೆದುಕೊಳ್ಳಬಹುದು ಎಂದು ಹೇಳಿದ್ದೇನೆ ಎಂದರು. 

ಇನ್ನು ಲೋಕಸಭಾ ಚುನಾವಣಾ ಫಲಿತಾಂಶ ಬಂದ ಬಳಿಕ ಹಾಗೂ ಉಪ ಚುನಾವಣೆ ನಂತರ ರಾಜ್ಯ ರಾಜಕೀಯದಲ್ಲಿ ವ್ಯತ್ಯಾಸಗಳಾಗುತ್ತದೆ ಎಂದಿದ್ದೆ ಎಂದರು.