ಬೆಂಗಳೂರು :  ಉತ್ತರ ಕರ್ನಾಟಕ ರಾಜಕೀಯಕ್ಕೆ ಡಿ.ಕೆ.ಶಿವಕುಮಾರ್ ಪ್ರವೇಶಿಸಿದ್ದು, ಇದಕ್ಕೆ ಕಾಂಗ್ರೆಸ್ ಮುಖಂಡರಕ್ಕೇ ಅಪಸ್ವರ ಎದುರಾಗಿದೆ. 

ಕುಂದಗೋಳ ಕ್ಷೇತ್ರದ  ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದು, ಅಲ್ಲಿನ  ನಾಯಕರ ಸಲಹೆ ತೆಗೆದುಕೊಳ್ಳದೇ ನೇಮಕ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಉತ್ತರ ಕರ್ನಾಟಕದ ಪ್ರಮುಖ ನಾಯಕರಾದ ಸತೀಶ್ ಜಾರಕಿಹೊಳಿ, ಇಲ್ಲಿರುವ ನಾವು ನಾಯಕರಲ್ಲವೇ ಎಂದು ಪ್ರಶ್ನೆ ಮಾಡಿದ್ದು, ಶಿವಕುಮಾರ್ ಗಿಂತಲೂ ಮೊದಲು ಕುಂದಗೋಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. 

ಡಿ.ಕೆ.ಶಿವಕುಮಾರ್ ಒಬ್ಬರೇ ನಾಯಕರಲ್ಲ. ನಾನೂ ನಾಯಕ. ಉತ್ತರ ಕರ್ನಾಟಕದ ನಾಯಕರ ತಾತ್ಸಾರ ಮಾಡುವುದು ಸರಿಯಲ್ಲ ಎನ್ನುವ ಸಂದೇಶ ರವಾನಿಸಲು ಮುಂದಾಗಿದ್ದಾರೆ. 

ಇನ್ನು ಕುಂದಗೋಳಕ್ಕೆ ಸತೀಶ್ ಭೇಟಿ ಕೊಟ್ಟ ಸಂದರ್ಭದಲ್ಲಿ ಶಿವಳ್ಳಿ ಪತ್ನಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು,  ಇಲ್ಲಿನ ನಾಯಕರನ್ನು ಈ ನಿಟ್ಟಿನಲ್ಲಿ ಜಾರಕಿಹೊಳಿ ಸಮಾಧಾನಪಡಿಸಿದ್ದಾರೆ.