ಬೆಂಗಳೂರು ಸೇರಿ ಕಾವೇರಿ ಕೊಳ್ಳದ ಜನರಿಗೆ ಒದಗಿಸುವ ಉದ್ದೇಶ
ಬೆಂಗಳೂರು(ಸೆ.23): ಕಾವೇರಿ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಸೇರಿರುವ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಕಾವೇರಿ ಕೊಳ್ಳದ 4 ಜಲಾಶಯಗಳಲ್ಲಿ ಸಂಗ್ರಹಿಸಿರುವ ನೀರನ್ನ ಕುಡಿಯುವ ನೀರಿಗಾಗಿ ಉಳಿಸಿಕೊಳ್ಳುವ ನಿರ್ಣಯವನ್ನ ಅಂಗೀಕರಿಸಲಾಗಿದೆ.
ರಾಜ್ಯ ಸರ್ಕಾರ ಮಂಡಿಸಿದ ಐತಿಹಾಸಿಕ ನಿರ್ಣಯ
- `4 ಜಲಾಶಯಗಳಲ್ಲಿ ಸಂಗ್ರಹಿಸಿರುವುದು ಕುಡಿಯುವ ನೀರಿಗಾಗಿ’
- `ಬೆಂಗಳೂರು ಸೇರಿ ಕಾವೇರಿ ಕೊಳ್ಳದ ಜನರಿಗೆ ಒದಗಿಸುವ ಉದ್ದೇಶ’
- `ಈ ಜಲಸಂಗ್ರಹಣೆಯನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳಲು ಸಾಧ್ಯವಿಲ್ಲ’
- `ಕುಡಿಯುವ ನೀರಿಗಾಗಿ ಈ ಜಲಸಂಗ್ರಹಣೆಯನ್ನು ಉಳಿಸಿಕೊಳ್ಳಲು ನಿರ್ಧಾರ
- `ಕುಡಿಯುವುದಕ್ಕೆ ಬಿಟ್ಟು ಬೇರೆ ಕಾರಣಗಳಿಗೆ ಈ ನೀರು ಬಳಕೆ ಇಲ್ಲ’
- `ಬೇರೆ ಯಾವುದೇ ಕಾರಣಕ್ಕೂ ಈ ನೀರು ಒದಗಿಸಲು ಸಾಧ್ಯವಿಲ್ಲ’ ಎಂಬ ನಿರ್ಣಯ
- `ಈ ನಿರ್ಣಯವನ್ನು ಸದನವು ಸರ್ವಾನುಮತದಿಂದ ಅಂಗೀಕರಿಸುತ್ತದೆ’
