ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಮನೆ ಮೇಲೆ ಕಳೆದ ಐಟಿ ದಾಳಿ ನಡೆದಿತ್ತು. ಐಟಿ ದಾಳಿಗೆ ಸನತ್ ಕುಮಾರ್ ಎಂಬುವರು ಕಾರಣವೆಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೋಳಿ, ಬೆಳಗಾವಿ ತಾ.ಪಂ ಅಧ್ಯಕ್ಷ ಶಂಕರಗೌಡ ಪಾಟೀಲ, ಪ್ರಣಯ ಶೆಟ್ಟಿ  ಸೇರಿದಂತೆ 25 ಜನರ ಗುಂಪೊಂದು ಮಚ್ಚು ಮತ್ತು ರಾಡ್​ ಹಿಡಿದುಕೊಂಡು ಹೋಗಿ ಸನತ್ ಕುಮಾರ್ ಎಂಬುವರ ಮನೆ ಮೇಲೆ ದಾಳಿ ಮಾಡಿ ಮನೆಯ ಗಾಜು ಪುಡಿ ಪುಡಿ ಮಾಡಿದ್ದಾರೆ.

ಬೆಳಗಾವಿ(ಜ.23): ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಮನೆ ಮೇಲೆ ಕಳೆದ ಐಟಿ ದಾಳಿ ನಡೆದಿತ್ತು. ಐಟಿ ದಾಳಿಗೆ ಸನತ್ ಕುಮಾರ್ ಎಂಬುವರು ಕಾರಣವೆಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೋಳಿ, ಬೆಳಗಾವಿ ತಾ.ಪಂ ಅಧ್ಯಕ್ಷ ಶಂಕರಗೌಡ ಪಾಟೀಲ, ಪ್ರಣಯ ಶೆಟ್ಟಿ ಸೇರಿದಂತೆ 25 ಜನರ ಗುಂಪೊಂದು ಮಚ್ಚು ಮತ್ತು ರಾಡ್​ ಹಿಡಿದುಕೊಂಡು ಹೋಗಿ ಸನತ್ ಕುಮಾರ್ ಎಂಬುವರ ಮನೆ ಮೇಲೆ ದಾಳಿ ಮಾಡಿ ಮನೆಯ ಗಾಜು ಪುಡಿ ಪುಡಿ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಗೋಮಟೇಶ ವಿದ್ಯಾಪೀಠದ ನಿರ್ದೇಶಕರಾದ ಸನತ್ ಕುಮಾರ್‌ಗೆ ಜೀವ ಬೆದರಿಕೆ ಹಾಕುವುದರ ಜೊತೆಗೆ ಸನತ್ ಕುಮಾರ್‌ ಪತ್ನಿ ಭಾಗ್ಯಶ್ರೀ ಮೇಲೂ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಸದ್ಯ 25 ಜನರ ವಿರುದ್ಧ ದೂರು ಟಿಳಕವಾಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.