ಈಶಾನ್ಯ ಭಾರತಕ್ಕೂ ಕಾಲಿಟ್ಟ ಗೋರಕ್ಷಕರು| ಗೋಮಾಂಸ ಮಾರುತ್ತಿದ್ದ ಆರೋಪದ ಮೇಲೆ ಅಲ್ಪಸಂಖ್ಯಾತ ವ್ಯಕ್ತಿಗೆ ಥಳಿತ| ಶಿಕ್ಷೆಯಾಗಿ ಹಂದಿ ಮಾಂಸ ತಿನ್ನಿಸಿದ ಗೋರಕ್ಷಕರು| ಶೌಕತ್ ಅಲಿ ಮೇಲಿನ ಹಲ್ಲೆ ವಿಡಿಯೋ ವೈರಲ್| ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ ಪೊಲೀಸರು| ಗಾಯಗೊಂಡಿರುವ ಶೌಕತ್ ಅಲಿ ಆಸ್ಪತ್ರೆಗೆ ದಾಖಲು|

ಬಿಸ್ವಾನಾಥ್(ಏ.09): ಗೋಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯೋರ್ವನನ್ನು ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಅಸ್ಸಾಂನ ಬಿಸ್ವಾನಾಥ್ ಜಿಲ್ಲೆಯಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶೌಕತ್ ಅಲಿ ಎಂಬ ವ್ಯಕ್ತಿಯ ಮೇಲೆ ಗುಂಪೊಂದು ಹಲ್ಲೆ ನಡೆಸಿದ್ದಲ್ಲದೇ , ಆತನಿಗೆ ಹಂದಿ ಮಾಂಸ ತಿನ್ನುವಂತೆ ಬಲವಂತ ಮಾಡಲಾಗಿದೆ ಎನ್ನಲಾಗಿದೆ. ಗೋಮಾಂಸ ಮಾರಾಟ ಮಾಡಿದ್ದಕ್ಕೆ ಶಿಕ್ಷೆಯಾಗಿ ಶೌಕತ್ ಅಲಿಗೆ ಹಂದಿ ಮಾಂಸ ತಿನ್ನಿಸಲಾಗಿದೆ.

ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಶೌಕತ್ ಅಲಿಯನ್ನು ರಕ್ಷಣೆ ಮಾಡಿದ್ದಲ್ಲದೇ , ಘಟನೆಗೆ ಸಂಬಂಧಿಸಿದಂತೆ ಐವರು ಯುವಕರನ್ನು ವಶಕ್ಕೆ ಪಡೆದಿದೆ. ಹಲ್ಲೆಗೊಳಗಾದ ಶೌಕತ್ ಅಲಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.