ಅಸ್ಸಾಂ ಹಾಗೂ ತಮಿಳುನಾಡು ಪರವಾಗಿ ಇವರು 74 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 285 ವಿಕೆಟ್ ಪಡೆದಿದ್ದಾರೆ. ಈ ಹುದ್ದೆಗಾಗಿ ಬಿಸಿಸಿಐ 5 ಮಂದಿಯನ್ನು ಸಂದರ್ಶಿಸಿತ್ತು.
ನವದೆಹಲಿ(ಜು.28): ಭಾರತ ಕ್ರಿಕೆಟ್ ತಂಡದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಬಾಲ್ಯದ ಕೋಚ್ ಹಾಗೂ ತಮಿಳುನಾಡಿನ ಮಾಜಿ ಸ್ಪಿನ್ನರ್ ಸುನಿಲ್ ಸುಬ್ರಮಣ್ಯಂ ಅವರನ್ನು ಭಾರತ ಕ್ರಿಕೆಟ್ ತಂಡದ ಆಡಳಿತಾತ್ಮಕ ವ್ಯವಸ್ಥಾಪಕರಾಗಿ ಬಿಸಿಸಿಐ ನೇಮಿಸಿದೆ.
ಸುಬ್ರಮಣ್ಯಂ ತಂಡದ ನಿರ್ದೇಶಕರಾಗಿ ಒಂದು ವರ್ಷಗಳ ಕಾಲ ಸೇವೆ ಸಲ್ಲಿಸಲಿದ್ದು, ಆ.3ರಿಂದ ಶ್ರೀಲಂಕಾ ವಿರುದ್ಧ ಆರಂಭಗೊಳ್ಳಲಿರುವ 2ನೇ ಟೆಸ್ಟ್ ವೇಳೆಗೆ ತಂಡವನ್ನು ಕೊಡಿಕೊಳ್ಳಲಿದ್ದಾರೆ. ಅಸ್ಸಾಂ ಹಾಗೂ ತಮಿಳುನಾಡು ಪರವಾಗಿ ಇವರು 74 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 285 ವಿಕೆಟ್ ಪಡೆದಿದ್ದಾರೆ. ಈ ಹುದ್ದೆಗಾಗಿ ಬಿಸಿಸಿಐ 5 ಮಂದಿಯನ್ನು ಸಂದರ್ಶಿಸಿತ್ತು.
