ಕೆಕೆಆರ್ ತಂಡ ಸ್ಪಿನ್ನರ್ ಸುನಿಲ್ ನಾರಾಯಣ್ ಅವರನ್ನು ಆರಂಭಿಕ ದಾಂಡಿಗನಾಗಿ ಕಣಕ್ಕಿಳಿಸಿದಂತೆ, ಬೇರೆ ತಂಡಗಳು ಇದೇ ರೀತಿ ಪ್ರಯೋಗಕ್ಕೆ ಮುಂದಾದರೆ ಯಶಸ್ವಿಯಾಗುವುದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಮುಂದಿನ ಐಪಿಎಲ್‌ನಲ್ಲಿ ನೀವು ಸಹ ಆರಂಭಿಕ ದಾಂಡಿಗನಾಗಿ ಕಣಕ್ಕಿಳಿಯಲು ಇಚ್ಛಿಸುವೀರಾ ಎಂದು ಕಾಲೆಳೆದಿದ್ದಾರೆ.

ನವದೆಹಲಿ(ಮೇ.02): ಗಾಯಾದ ಸಮಸ್ಯೆಯಿಂದ ಪ್ರಸಕ್ತ ನಡೆಯುತ್ತಿರುವ ಐಪಿಎಲ್ ಟೂರ್ನಿಯಿಂದ ಹೊರಗುಳಿದಿದ್ದರೂ ಆ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಐಪಿಎಲ್ ಕುರಿತು ಕಾಮೆಂಟ್‌ಗಳನ್ನು ಮಾಡುವ ಮೂಲಕ ಅಶ್ವಿನ್ ಸುದ್ದಿಯಲ್ಲಿದ್ದಾರೆ.

ಕೆಕೆಆರ್ ತಂಡ ಸ್ಪಿನ್ನರ್ ಸುನಿಲ್ ನಾರಾಯಣ್ ಅವರನ್ನು ಆರಂಭಿಕ ದಾಂಡಿಗನಾಗಿ ಕಣಕ್ಕಿಳಿಸಿದಂತೆ, ಬೇರೆ ತಂಡಗಳು ಇದೇ ರೀತಿ ಪ್ರಯೋಗಕ್ಕೆ ಮುಂದಾದರೆ ಯಶಸ್ವಿಯಾಗುವುದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಮುಂದಿನ ಐಪಿಎಲ್‌ನಲ್ಲಿ ನೀವು ಸಹ ಆರಂಭಿಕ ದಾಂಡಿಗನಾಗಿ ಕಣಕ್ಕಿಳಿಯಲು ಇಚ್ಛಿಸುವೀರಾ ಎಂದು ಕಾಲೆಳೆದಿದ್ದಾರೆ.

ಇದಕ್ಕೆ ಸೂಕ್ಷ್ಮವಾಗಿಯೇ ಪ್ರತಿಕ್ರಿಯಿಸಿರುವ ಅಶ್ವಿನ್, ಅದು ನಾನೆಂದು ಕೊಂಡಂತೆ ಆಗುವುದಿಲ್ಲ. ಇದು ನಾಯಕನಿಗೆ ಬಿಟ್ಟ ನಿರ್ಣಯ ಎಂದಿದ್ದಾರೆ.